ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸೇರಿ ಹಲವು ದೇಶಗಳ ಮೇಲೂ ಚೀನಾ ಕಣ್ಗಾವಲು ಬಲೂನ್‌ಗಳ ಹಾರಾಟ: ವರದಿ

‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ವರದಿಯಲ್ಲಿ ಉಲ್ಲೇಖ
Last Updated 8 ಫೆಬ್ರುವರಿ 2023, 13:06 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತ ಹಾಗೂ ಜಪಾನ್‌ ಸೇರಿದಂತೆ ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ಚೀನಾ ತನ್ನ ಗೂಢಚಾರಿಕೆ ಬಲೂನ್‌ಗಳ ಹಾರಾಟ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಕ್ಷಣಾ ಹಾಗೂ ಗುಪ್ತಚರ ಇಲಾಖೆಗಳ ಕೆಲ ಅಧಿಕಾರಿಗಳು ಸಂದರ್ಶನ ವೇಳೆ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ.

ಚೀನಾದ ದಕ್ಷಿಣ ಕರಾವಳಿಗೆ ಹೊಂದಿಕೊಂಡಿರುವ ಹೆನಾನ್‌ ಪ್ರಾಂತ್ಯದ ಮೂಲಕ ಈ ಕಣ್ಗಾವಲು ಬಲೂನ್‌ಗಳ ಕಾರ್ಯಾಚರಣೆ ನಡೆಸಲಾಗಿದೆ. ಜಪಾನ್‌, ಭಾರತ, ವಿಯೆಟ್ನಾಂ, ತೈವಾನ್ ಹಾಗೂ ಫಿಲಿಪ್ಪೀನ್ಸ್‌ ದೇಶಗಳ ಮಿಲಿಟರಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಚೀನಾ ಇವುಗಳನ್ನು ಬಳಸಿದೆ ಎಂದೂ ಪತ್ರಿಕೆ ವರದಿ ಮಾಡಿದೆ.

‘ಪೀಪಲ್ಸ್‌ ಲಿಬರೇಷನ್ ಆರ್ಮಿಯ (ಪಿಎಲ್‌ಎ) ವಾಯುನೆಲೆಯಿಂದಲೂ ಕೆಲವು ಬಲೂನ್‌ಗಳ ಕಾರ್ಯಾಚರಣೆ ನಡೆದಿದೆ. ಐದು ಖಂಡಗಳ ವಾಯುಪ್ರದೇಶಗಳಲ್ಲಿ ಈ ಕಣ್ಗಾವಲು ಬಲೂನ್‌ಗಳು ಹಾರಾಟ ನಡೆಸಿರುವುದನ್ನು ಪತ್ತೆ ಮಾಡಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅವಶೇಷಗಳ ಚಿತ್ರ ಬಿಡುಗಡೆ: ಅಮೆರಿಕ ಪಡೆಗಳು ಹೊಡೆದುರುಳಿಸಿದ್ದ ಚೀನಾದ ಕಣ್ಗಾವಲು ಬಲೂನ್‌ನ ಅವಶೇಷಗಳನ್ನು ಅಟ್ಲಾಂಟಿಕ್‌ ಸಾಗರದಲ್ಲಿ ನೌಕಾಪಡೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಂಡಿರುವ ಅವಶೇಷಗಳ ಚಿತ್ರಗಳನ್ನು ನೌಕಾಪಡೆ ಬಿಡುಗಡೆ ಮಾಡಿದೆ.

ಆಳ ಸಮುದ್ರದಲ್ಲಿ ಕಾರ್ಯ ನಿರ್ವಹಿಸಬಲ್ಲ ಡ್ರೋನ್‌ಗಳು, ಯುದ್ಧನೌಕೆಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು ಎಂದು ಅಮೆರಿಕ ನೌಕಾಪಡೆಯ ನಾರ್ದರ್ನ್ ಕಮಾಂಡ್‌ನ ಜನರಲ್ ಗ್ಲೆನ್‌ ವ್ಯಾನ್‌ಹೆರ್ಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT