ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಂಸತ್ತಿನಲ್ಲಿ 'ಚೀನಾ ಪ್ರಚಾರ ವಿರೋಧಿ ಕಾಯ್ದೆ' ಮಂಡನೆ

Last Updated 25 ಫೆಬ್ರುವರಿ 2021, 8:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತನ್ನ ನೆಲದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಇತರ ವಿಷಯಗಳ ಕುರಿತು ಜಗತ್ತಿಗೆ ಚೀನಾ ತಪ್ಪು ಮಾಹಿತಿ ನೀಡುವುದನ್ನು ತಡೆದು, ಅಗತ್ಯ ಕಂಡು ಬಂದಲ್ಲಿ ಆ ದೇಶದ ವಿರುದ್ಧ ನಿರ್ಬಂಧ ಹೇರಲು ಅನುವು ಮಾಡಿಕೊಡುವ ‘ಚೀನಾ ಪ್ರಚಾರ ವಿರೋಧಿ ಕಾಯ್ದೆ’ ಎಂಬ ಮಸೂದೆಯನ್ನು ಅಮೆರಿಕದ ಸಂಸತ್‌ನಲ್ಲಿ ಮಂಡಿಸಲಾಗಿದೆ.

ರಿಪಬ್ಲಿಕನ್‌ ಸ್ಟಡಿ ಕಮಿಟಿ ಅಧ್ಯಕ್ಷ, ಸಂಸದ ಜಿಮ್‌ ಬ್ಯಾಂಕ್ಸ್‌ ಹಾಗೂ ಸೆನೆಟ್‌ ಸದಸ್ಯ ಟಾಮ್‌ ಕಾಟನ್‌ ಅವರು ಈ ಸಂಬಂಧದ ಮಸೂದೆಯನ್ನು ಮಂಡಿಸಿದರು.

ರಿಪಬ್ಲಿಕನ್‌ ಸ್ಟಡಿ ಕಮಿಟಿಯ ನ್ಯಾಷನಲ್‌ ಸೆಕ್ಯುರಿಟಿ ಸ್ಟ್ರಾಟಜಿ ಅಧ್ಯಯನ ನಡೆಸಿ, ಮಾಡಿರುವ ಶಿಫಾರಸಿನ ಆಧಾರದಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ.

ಚೀನಾದ ಕಮ್ಯುನಿಸ್ಟ್‌ ಪಾರ್ಟಿಯ (ಸಿಪಿಸಿ) ಸಾಗರೋತ್ತರ ವಿದ್ಯಮಾನ ನೋಡಿಕೊಳ್ಳುವ ಅಂಗಸಂಸ್ಥೆಯಾದ ಯುನೈಟೆಡ್‌ ಫ್ರಂಟ್‌ ವರ್ಕ್‌ ಡಿಪಾರ್ಟ್‌ಮೆಂಟ್‌ (ಯುಎಫ್‌ಡಬ್ಲ್ಯುಡಿ), ಚೀನಾ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಕೈಗೊಂಡು, ಅಭಿಪ್ರಾಯ ರೂಪಿಸುವ ಕಾರ್ಯ ಮಾಡುತ್ತದೆ.

‘ಚೀನಾದಲ್ಲಿ ಉಯಿಘರ್‌ ಮುಸ್ಲಿಮರ ಹತ್ಯೆ, ಕ್ರೈಸ್ತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದಲ್ಲಿ ಯುಎಫ್‌ಡಬ್ಲ್ಯುಡಿ ಶಾಮೀಲಾಗಿದೆ. ಆದರೆ, ಈ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ. ಇದೇ ರೀತಿಯ ದೌರ್ಜನ್ಯವನ್ನು ಜಗತ್ತಿನ ಇತರೆಡೆ ವಿಸ್ತರಿಸುವುದೇ ಇದರ ಗುರಿಯಾಗಿದೆ’ ಎಂದು ಬ್ಯಾಂಕ್ಸ್‌ ಆರೋಪಿಸುತ್ತಾರೆ.

ಈ ಕಾಯ್ದೆ ಜಾರಿಯಾದರೆ, ಯುಎಫ್‌ಡಬ್ಲ್ಯುಡಿ ಮೇಲೆ ನಿರ್ಬಂಧ ಹೇರಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT