ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಕಾಂಗ್‌– ಭಾರತ ವಿಮಾನಗಳ ಹಾರಾಟ ರದ್ದು

Last Updated 18 ಏಪ್ರಿಲ್ 2021, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ವ್ಯಾಪಕವಾಗುತ್ತಿರುವುದರಿಂದ ಭಾರತಕ್ಕೆ ಬರುವ ಎಲ್ಲ ವಿಮಾನಗಳ ಹಾರಾಟವನ್ನು ಹಾಂಕಾಂಗ್‌ ಸರ್ಕಾರವು ಮಂಗಳವಾರದಿಂದ(ಏಪ್ರಿಲ್‌ 20) ಮೇ 3ರ ತನಕ ನಿಷೇಧಿಸಿದೆ ಎಂದು ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ಹಾಂಕಾಂಗ್‌ ಸರ್ಕಾರವು ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್‌ನಿಂದ ತೆರಳುವ ಹಾಗೂ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಮೇ 3ರವರೆಗೆ ರದ್ದುಗೊಳಿಸಿದೆ.

ಈಚೆಗೆ ಹಾಂಕಾಂಗ್‌ಗೆ ತೆರಳುವ ವಿಸ್ತಾರ ವಿಮಾನಗಳಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೋವಿಡ್‌–19 ದೃಢಪಟ್ಟಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ, ಹಾಂಕಾಂಗ್‌ಗೆ ತೆರಳುವ ಎಲ್ಲಾ ಪ್ರಯಾಣಿಕರು ಪ್ರಯಾಣಕ್ಕೂ 72 ಗಂಟೆ ಮುಂಚಿತವಾಗಿ ಪರೀಕ್ಷೆ ನಡೆಸಿ, ಕೋವಿಡ್‌ ನೆಗೆಟೀವ್‌ ಆರ್‌ಟಿಪಿಸಿಆರ್‌ ವರದಿ ಪಡೆದು ತರಬೇಕು. ಆದರೆ ಪ್ರಯಾಣಿಕರಲ್ಲಿ ಕೋವಿಡ್‌–19 ದೃಢಪಟ್ಟಿದ್ದರಿಂದ ಮೇ 2ರವರೆಗೆ ಮುಂಬೈ– ಹಾಂಕಾಂಗ್‌ ಮಾರ್ಗದ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾನುವಾರ ಬೆಳಿಗ್ಗೆ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT