ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World update: ಜಗತ್ತಿನಾದ್ಯಂತ 92.50 ಲಕ್ಷ ಸಕ್ರಿಯ ಪ್ರಕರಣಗಳು

Last Updated 20 ಅಕ್ಟೋಬರ್ 2020, 16:39 IST
ಅಕ್ಷರ ಗಾತ್ರ
ADVERTISEMENT
""
""

ವಾಷಿಂಗ್ಟನ್:ಬ್ರೆಜಿಲ್, ಅರ್ಜೆಂಟೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತೆ ಹೆಚ್ಚಾಗಿದೆ.

ವರ್ಡೊ ಮೀಟರ್‌ ವೆಬ್‌ಸೈಟ್ ಅಂಕಿಅಂಶ ಪ್ರಕಾರ, ಅಮೆರಿಕದಲ್ಲಿ ಈವರೆಗೆ 84.68 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು, 2.25 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. 55.13 ಲಕ್ಷಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

ವಿಶ್ವದಾದ್ಯಂತ ಈವರೆಗೆ 3.04 ಕೋಟಿಗೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 4.08 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 11.25 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಜಗತ್ತಿನಾದ್ಯಂತ 92,50,645 ಸಕ್ರಿಯ ಪ್ರಕರಣಗಳಿವೆ.

ಅರ್ಜೆಂಟೀನಾದಲ್ಲಿ ಒಂದೇ ದಿನ 12,982 ಪ್ರಕರಣ, 449 ಸಾವು, ಕೆನಡಾದಲ್ಲಿ 3,289 ಪ್ರಕರಣ, 18 ಸಾವು, ಬ್ರೆಜಿಲ್‌ನಲ್ಲಿ 15,783 ಪ್ರಕರಣ 321 ಸಾವು, ಜರ್ಮನಿಯಲ್ಲಿ 6,750 ಪ್ರಕರಣಗಳು ಹಾಗೂ 33 ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT