ಕೋವಿಡ್-19: ಅಮೆರಿಕದ ನ್ಯೂಯಾರ್ಕ್‌ನಿಂದ ಭಾರತಕ್ಕೆ ವೈದ್ಯಕೀಯ ಪರಿಕರ ರವಾನೆ

ನ್ಯೂಯಾರ್ಕ್: ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ, ಅಮೆರಿಕದ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಆಫ್ ದಿ ಟ್ರೈ ಸ್ಟೇಟ್ ಏರಿಯಾ ಆಫ್ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್(ಎಫ್‌ಐಎ–ಎನ್‌ವೈ ಎನ್‌ಜೆ ಸಿಟಿ) ಎಂಬ ಸಂಸ್ಥೆ, ವೆಂಟಿಲೇಟರ್ ಮತ್ತು ಪಲ್ಸ್ ಆಕ್ಸಿಮೀಟರ್ ಸೇರಿದಂತೆ ವಿವಿಧ ವೈದ್ಯಕೀಯ ಪರಿಕರಗಳನ್ನು ರವಾನಿಸಿದೆ.
‘300 ವೆಂಟಿಲೇಟರ್‌ಗಳು, ವೆಂಟಿಲೇಟರ್ ಸರ್ಕೀಟ್‌ಗಳು, ಫಿಲ್ಟರ್‌ಗಳು, ಫ್ಲೋ ಸೆನ್ಸರ್ಸ್‌ಗಳು ಸೇರಿ 3,000 ವೈದ್ಯಕೀಯ ಸಾಧನಗಳು, 100 ಪೋರ್ಟಬಲ್ ವೆಂಟಿಲೇಟರ್ ಮತ್ತು 3,10,176 ಪಲ್ಸ್ ಆಕ್ಸಿಮೀಟರ್‌ಗಳನ್ನು ಮುಂಬೈ ಹಾಗೂ ದೆಹಲಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತದ ಡೆಪ್ಯುಟಿ ಕಾನ್ಸುಲ್ ಜನರಲ್ ಶತ್ರುಘ್ನ ಸಿನ್ಹ ಅವರು, ಭಾರತಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಕಳುಹಿಸಿದ ಎಫ್‌ಐಎ ಕಾರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.