ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಗಾಸ್ಕರ್‌ ಅಪ್ಪಳಿಸಿದ ಬಾಟ್ಸಿರಾಯ್‌ ಚಂಡಮಾರುತ

Last Updated 6 ಫೆಬ್ರುವರಿ 2022, 11:06 IST
ಅಕ್ಷರ ಗಾತ್ರ

ಅಂತನಾನರಿವೊ: ಭಾರಿ ಗಾಳಿ ಮತ್ತು ಮಳೆಯೊಂದಿಗೆ ಮಡಗಾಸ್ಕರ್‌ನ ಪೂರ್ವ ಕರಾವಳಿಗೆ ಶನಿವಾರ ರಾತ್ರಿ ಬಾಟ್ಸಿರಾಯ್‌ ಚಂಡಮಾರುತ ಅಪ್ಪಳಿಸಿದೆ.

ಪೂರ್ವ ಕರಾವಳಿ ಮಣಂಜರಿಯಾಕ್ಕೆ ಅಪ್ಪಳಿಸಿದ ಉಷ್ಣ ಚಂಡಮಾರುತ, ಹಿಂದೂ ಮಹಾಸಾಗರದತ್ತ ಬೀಸುತ್ತಿದ್ದಂತೆ ಹೆಚ್ಚು ವೇಗ ಪಡೆದುಕೊಂಡಿತು. ಇದು ಗಂಟೆಗೆ 235 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿತ್ತು ಎಂದು ದ್ವೀಪ ರಾಷ್ಟ್ರದ ಹವಾಮಾನ ಇಲಾಖೆ ತಿಳಿಸಿದೆ. ಇದೀಗ ಚಂಡಮಾರುತ ಸ್ವಲ್ಪ ದುರ್ಬಲಗೊಂಡಿದ್ದರೂ, ಭಾರಿ ಮಳೆಯಿಂದ ಉಂಟಾಗುವ ಪ್ರವಾಹ ಸಾಕಷ್ಟು ಹಾನಿ ಮಾಡುವ ನಿರೀಕ್ಷೆ ಇದೆ.

ಶೋನಾ ಭಾಷೆಯಲ್ಲಿ ಬಾಟ್ಸಿರಾಯ್‌ ಎಂದರೆ ಅಪಾಯಕಾರಿ ಚಂಡಮಾರುತ ಎಂದು ಹೆಸರಿಸಲಾಗಿದೆ.

ಮುನ್ನೆಚ್ಚರಿಕೆಯಾಗಿ 22 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಶುಕ್ರವಾರದಿಂದಲೇ ಭಾರಿ ಗಾಳಿ ಬೀಸಲಾರಂಭಿಸಿದ್ದು, ಹಲವಾರು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ. 2.8 ಕೋಟಿ ಜನಸಂಖ್ಯೆಯ ದೇಶದಲ್ಲಿ ಚಂಡಮಾರುತ 6 ಲಕ್ಷದಷ್ಟು ಜನರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT