ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿಯಲ್ಲಿ ಪ್ರವಾಹ: ಸತ್ತವರ ಸಂಖ್ಯೆ 70ಕ್ಕೆ ಏರಿಕೆ, 47 ಮಂದಿ ನಾಪತ್ತೆ

Last Updated 16 ಆಗಸ್ಟ್ 2021, 10:50 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಟರ್ಕಿಯ ಕಪ್ಪು ಸಮುದ್ರದ ಪ್ರಾಂತ್ಯಗಳಲ್ಲಿರುವ ಪಟ್ಟಣಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಸತ್ತವರ ಸಂಖ್ಯೆ 70ಕ್ಕೆ ಏರಿದ್ದು, ಇನ್ನೂ 47 ಮಂದಿ ನಾಪತ್ತೆಯಾಗಿದ್ದಾರೆ. ತುರ್ತು ಪರಿಹಾರ ಕಾರ್ಯಾಚರಣೆ ತಂಡ ನಾಪತ್ತೆಯಾದವರಿಗಾಗಿ ಶೋಧ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ತಮೋನು ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ 60 ಜನರು ಸಾವನ್ನಪ್ಪಿದ್ದಾರೆ. ಸಿನೋಪ್‌ನಲ್ಲಿ ಇನ್ನೂ ಒಂಬತ್ತು ಜನರು ಮತ್ತು ಬಾರ್ಟಿನ್ ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ನಿರ್ದೇಶನಾಲಯ ಹೇಳಿದೆ. ಕಸ್ತಮೋನು ಮತ್ತು ಸಿನೋಪ್‌ನಲ್ಲಿ ನಲವತ್ತೇಳು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ಸಂಭವಿಸಿದ ಪ್ರವಾಹದ ರಭಸಕ್ಕೆ ಕಟ್ಟಡಗಳು ಮತ್ತು ಸೇತುವೆಗಳು ನೆಲಕಚ್ಚಿದವು. ರಸ್ತೆಯಲ್ಲಿದ್ದ ಕಾರು ಮತ್ತಿತರ ವಾಹನಗಳು ಮಣ್ಣಿನ ಅವಶೇಷಗಳಡಿ ಸಿಲುಕಿದವು. ರಸ್ತೆಗಳು ಬಂದ್‌ ಆದವು. ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು.

ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ದೃಶ್ಯಗಳಲ್ಲಿ ಕಸ್ತಮೋನು ಪ್ರಾಂತ್ಯದ ಬೋಜ್‌ಕುರ್ಟ್ ಪಟ್ಟಣದಲ್ಲಿ ಭಾರಿ ಹಾನಿ ಉಂಟಾಗಿರುವುದು ಕಾಣುತ್ತಿದೆ. ಪಾಳುಬಿದ್ದ ಕಟ್ಟಡಗಳಲ್ಲಿ ರಕ್ಷಣಾ ತಂಡಗಳು ಶೋಧಕಾರ್ಯ ನಡೆಸುತ್ತಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಂದ 2 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಹೆಲಿಕಾಫ್ಟರ್‌ಗಳನ್ನು ಬಳಸಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಹಣಾ ನಿರ್ದೇಶನಾಲಯ(ಎಎಫ್‌ಎಡಿ)ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT