ಗುರುವಾರ , ಅಕ್ಟೋಬರ್ 6, 2022
27 °C

ಅಮೆರಿಕ ಮೂಲದ ಹಿಂದೂ ಸಂಘಟನೆಯಿಂದ 'ಸ್ವಸ್ತಿಕ' ಸಾಕ್ಷ್ಯಚಿತ್ರ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಮೂಲದ ಹಿಂದೂ ಸಂಘಟನೆಯು 'ಸ್ವಸ್ತಿಕ'ದ ಮೇಲೆ ಬೆಳಕು ಚೆಲ್ಲುವ ಚಿಂತನಾತ್ಮಕ ಸಾಕ್ಷ್ಯಚಿತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದೆ. ವಿಶ್ವದಾದ್ಯಂತ ಇರುವ 200 ಕೋಟಿಗೂ ಹೆಚ್ಚು ಹಿಂದೂಗಳು, ಬೌದ್ಧರು ಮತ್ತು ಜೈನರು ಸ್ವಸ್ತಿಕವನ್ನು ಶಾಂತಿ ಮತ್ತು ನೆಮ್ಮದಿಯ ಸಂಕೇತವಾಗಿ ನಂಬಿಕೆ ಇರಿಸಿದ್ದಾರೆ.

ದೆಹಲಿಯ ಎಕೆಟಿಎ ಮೀಡಿಯಾದ ಸಹಯೋಗದಲ್ಲಿ ಕೊಲಿಷನ್‌ ಆಫ್‌ ಹಿಂದೂಸ್‌ ಆಫ್‌ ನಾರ್ಥ್‌ ಅಮೆರಿಕ(ಸಿಒಎಚ್‌ಎನ್‌ಎ) ಸಾಕ್ಷ್ಯಚಿತ್ರ 'ದಿ ಸೈಲೆನ್ಸ್‌ ಆಫ್‌ ಸ್ವಸ್ತಿಕ'ವನ್ನು ಬಿಡುಗಡೆ ಮಾಡಿದ್ದಾರೆ.

ದ್ವೇಷದಿಂದ ಕೂಡಿದ ಅಪರಾಧಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಈ ಸಾಕ್ಷ್ಯಚಿತ್ರವು ಮಹತ್ವವೆನಿಸಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಸ್ವಸ್ತಿಕವನ್ನು ನಾಜಿ ಜರ್ಮನಿ ನಡೆಸಿದ ಜನಾಂಗೀಯ ಹತ್ಯೆ ಮತ್ತು ಅನಾಗರಿಕ ಕಿರುಕುಳದ ಚಿಹ್ನೆಯಾಗಿ ಬಳಸುತ್ತಿವೆ.

ಪಾಶ್ಚಿಮಾತ್ಯ ಜಗತ್ತಿನಲ್ಲಿ ಸ್ವಸ್ತಿಕ ಹಿಟ್ಲರ್‌ನ ಚಿಹ್ನೆ ಎಂಬುದಾಗಿ ಹೇಗೆ ವಿರೂಪಗೊಳಿಸಲಾಗಿದೆ ಎಂಬುದನ್ನು ಅರ್ಥೈಸುವ ಪ್ರಯತ್ನ ಇದಾಗಿದೆ ಎಂದು ಸಿಒಎಚ್‌ಎನ್‌ಎ ಅಧ್ಯಕ್ಷ ನಿಕುಂಜ್‌ ತ್ರಿವೇದಿ ತಿಳಿಸಿದ್ದಾರೆ.

ದ್ವೇಷದಿಂದ ಕೂಡಿದ ಅಪರಾಧಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿ ಪವಿತ್ರ ಚಿಹ್ನೆ ಮತ್ತು ದ್ವೇಷೀಯ ಚಿಹ್ನೆ ನಡುವಿನ ವ್ಯತ್ಯಾಸದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ನಿಕುಂಜ್‌ ತ್ರಿವೇದಿ ಹೇಳಿದ್ದಾರೆ.

2021ರ ಡಿಸೆಂಬರ್‌ನಲ್ಲಿ 'ದಿ ಸೈಲೆನ್ಸ್‌ ಆಫ್‌ ಸ್ವಸ್ತಿಕ' ಸಾಕ್ಷ್ಯಚಿತ್ರವು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಜಾಗತಿಕ ಮಟ್ಟದಲ್ಲಿ ತಲುಪಬೇಕು ಎಂಬ ಬೇಡಿಕೆ ಹಿನ್ನೆಲೆ ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಅನೂಜ್‌ ಭಾರಧ್ವಜ್‌ ತಿಳಿಸಿದ್ದಾರೆ.

ಈ ಚಿತ್ರದ ಮೂಲಕ ನಾಜಿ ಚಿಹ್ನೆ ಹಾಕನ್‌ಕ್ರೂಜ್‌ ಮತ್ತು ಧಾರ್ಮಿಕ ಚಿಹ್ನೆ ಸ್ವಸ್ತಿಕಕ್ಕೆ ಇರುವ ವ್ಯತ್ಯಾಸದ ಬಗ್ಗೆ ಜನರು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಭಾರಧ್ವಜ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು