ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಜತೆ ಉದ್ಯಮ ನಡೆಸಿದ್ದ ಟ್ರಂಪ್‌: ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖ

Last Updated 21 ಅಕ್ಟೋಬರ್ 2020, 8:07 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚುನಾವಣಾ ಪ್ರಚಾರದಲ್ಲಿ ’ಬೈಡನ್ ಚೀನಾ ವಿಚಾರದಲ್ಲಿ ದುರ್ಬಲರಾಗಿದ್ದಾರೆ’ ಎಂದು ಆರೋಪಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೂ ಒಂದು ಕಾಲದಲ್ಲಿ ಚೀನಾದೊಂದಿಗೆ ಉದ್ಯಮ ನಡೆಸಲು ಸಾಕಷ್ಟು ವರ್ಷಗಳನ್ನು ವ್ಯಯಿಸಿದ್ದಾರೆ ಎಂಬ ಮಾಹಿತಿಯನ್ನು ಮಂಗಳವಾರ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆ ವರದಿ ಪ್ರಕಟಿಸಿದೆ.

’ಟ್ರಂಪ್ ಅಧ್ಯಕ್ಷರಾದ ಬಳಿಕ ಚೀನಾದಲ್ಲಿ ಕಚೇರಿಯನ್ನು ನಿರ್ವಹಿಸುತ್ತಿದ್ದರು ಮತ್ತು ಅಲ್ಲಿನ ಸರ್ಕಾರಿ ಸ್ವಾಮ್ಯದಲ್ಲಿರುವ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದ್ದರು’ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಟ್ರಂಪ್ ಅವರು ತೆರಿಗೆ ಸಲ್ಲಿಸಿರುವ ದಾಖಲೆಗಳ ವಿಶ್ಲೇಷಣೆ ಪ್ರಕಾರ, ’ಈ ಹಿಂದೆ ಅವರು ಚೀನಾದಲ್ಲಿ ಅಪರಿಚಿತ ಬ್ಯಾಂಕ್ ಖಾತೆ ಹೊಂದಿದ್ದರು. ಅದನ್ನು ಟ್ರಂಪ್ ಇಂಟರ್ನ್ಯಾಷನಲ್ ಹೊಟೇಲ್ ಮ್ಯಾನೇಜ್‌ಮೆಂಟ್‌ ನಿಯಂತ್ರಿಸುತ್ತಿತ್ತು’ ಎಂದು ವರದಿಯಲ್ಲಿ ಹೇಳಿದೆ.

ಇತ್ತೀಚೆಗೆ ಟ್ರಂಪ್ ಅವರು ಚುನಾವಣಾ ಪ್ರಚಾರದ ವೇಳೆ ಬೈಡನ್‌ ಪುತ್ರ ಹಂಟನ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಒಬಾಮ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಜೊ ಬೈಡನ್ ಅವರ ಅಧಿಕಾರ ಬಳಸಿಕೊಂಡು ಚೀನಾ, ಉಕ್ರೇನ್ ಕಂಪನಿಯೊಂದಿಗೆ ಹಣದ ವ್ಯವಹಾರ ನಡೆಸಿದ್ದರು’ ಎಂದು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT