ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟಿಷ್‌ ಲೇಖಕ ಡಗ್ಲಾಸ್ ಸ್ಟುವರ್ಟ್‌ ಚೊಚ್ಚಲ ಕಾದಂಬರಿಗೆ ಬುಕರ್ ಪ್ರಶಸ್ತಿ

Last Updated 20 ನವೆಂಬರ್ 2020, 8:16 IST
ಅಕ್ಷರ ಗಾತ್ರ

ಲಂಡನ್‌: ನ್ಯೂಯಾರ್ಕ್‌ ಮೂಲದ ಸ್ಕಾಟಿಸ್ ಲೇಖಕ ಡಗ್ಲಾಸ್‌ ಸ್ಟುವರ್ಟ್‌ ತನ್ನ ಆತ್ಮಚರಿತ್ರೆ ಆಧರಿಸಿದ ಚೊಚ್ಚಲ ಕಾದಂಬರಿ ‘ಶಗ್ಗಿ ಬೈನ್‌‘ಗಾಗಿ ‍ 2020ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದು 1980ರ ಗ್ಲ್ಯಾಸ್ಕೊದಲ್ಲಿ ನಡೆಯುವ ಪ್ರೇಮ ಮತ್ತು ಮದ್ಯಪಾನ ವಿಷಯಗಳ ಕುರಿತಾದ ಕಥೆಯಾಧಾರಿತ ಕಾದಂಬರಿ.

ದುಬೈನ ಭಾರತೀಯ ಮೂಲದ ಲೇಖಕರಿ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್‌ ಶುಗರ್‘ ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿತ್ತು. ಈ ಕಾದಂಬರಿಯನ್ನು ಹಿಂದಿಕ್ಕಿ, ಸ್ಟುವರ್ಟ್‌ ಕೃತಿ ಪ್ರಶಸ್ತಿ ಗೆದ್ದುಕೊಂಡಿದೆ.

44 ವರ್ಷದ ಸ್ಟುವರ್ಟ್ ಈ ಚೊಚ್ಚಲ ಕಾದಂಬರಿಯನ್ನು ಮದ್ಯಪಾನದ ಚಟದಿಂದ ಮೃತಪಟ್ಟ ತನ್ನ ತಾಯಿಗೆ ಅರ್ಪಿಸಿದ್ದಾರೆ.

16ನೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡ ಸ್ಟುವರ್ಟ್‌, ಮುಂದೆ ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದು, ಫ್ಯಾಷನ್ ವಿನ್ಯಾಸ ಕ್ಷೇತ್ರದಲ್ಲಿ ವೃತ್ತಿಜೀವನ ಕಂಡುಕೊಳ್ಳಲು ನ್ಯೂಯಾರ್ಕ್‌ಗೆ ತೆರಳಿದರು. ಅಲ್ಲಿ ವಸ್ತ್ರವಿನ್ಯಾಸಕರಾಗಿ ಕ್ಯಾಲ್ವಿನ್ ಕ್ಲೈನ್, ರಾಲ್ಫ್ ಲಾರೆನ್ ಮತ್ತು ಗ್ಯಾಪ್ ಸೇರಿದಂತೆ ವಿವಿಧ ಬ್ರಾಂಡ್‌ಗಳಿಗಾಗಿ ಕೆಲಸ ಮಾಡಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ಕಾದಂಬರಿ ರಚಿಸಿದ್ದಾರೆ. ಒಂದು ದಶಕದ ಹಿಂದೆ ಈ ಕಾದಂಬರಿ ಬರೆಯಲು ಆರಂಭಿಸಿದ್ದಾರೆ ಸ್ಟುವರ್ಟ್‌.

ಪ್ರಶಸ್ತಿ ಪಡೆದಿರುವುದರ ಕುರಿತು ಪ್ರತಿಕ್ರಿಯಿಸಿರುವ ಸ್ಟುವರ್ಟ್‌, ‘ಇದನ್ನು ನಂಬಲು ಸಾಧವಾಗುತ್ತಿಲ್ಲ. ಈ ಕಾದಂಬರಿಯ ಕಥೆ ಕಾಲ್ಪನಿಕವಾದರೂ, ಇದನ್ನು ಬರೆಯುತ್ತಾ, ನನ್ನ ಮನಸ್ಸು ತುಂಬಾ ಹಗುರವಾಯಿತು‘ ಎಂದು ಹೇಳಿದ್ದಾರೆ.

‘ನಾನೊಬ್ಬ ಲೇಖಕನಾಗಬೇಕೆಂದು ಕನಸು ಕಂಡಿದ್ದೆ. ಅದು ಈ ಕಾದಂಬರಿಯ ಮೂಲಕ ನನಸಾಗಿದೆ. ಈ ಕಾದಂಬರಿ ನನ್ನ ಇಡೀ ನನ್ನ ಬದುಕನ್ನೇ ಬದಲಿಸಿತು‘ ಎಂದು ಸ್ಟುವರ್ಟ್ ಹೇಳಿದ್ದಾರೆ.

ದುಬೈ ಮೂಲದ ಭಾರತೀಯ ಲೇಖಕಿ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್ ಶುಗರ್‌‘, ಈ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಕೊನೆಯ ಸುತ್ತಿನಲ್ಲಿ ಆರು ಲೇಖಕರು ಸ್ಪರ್ಧೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT