ಭಾನುವಾರ, ನವೆಂಬರ್ 29, 2020
24 °C

ಪಾಕಿಸ್ತಾನದಲ್ಲಿ 5.2 ತೀವ್ರತೆಯ ಭೂಕಂಪನ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ವೆಟಾ: ಪಾಕಿಸ್ತಾನದ ಕ್ವೆಟಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ಭೂ ಕಂಪಿಸಿದ್ದು, ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ಭೂಕಂಪನ ನಿಗಾ ಕೇಂದ್ರ ಹೇಳಿದೆ.

ಶನಿವಾರ ಬೆಳಿಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪನದಲ್ಲಿ ಇದರ ತೀವ್ರತೆ 5.2 ದಾಖಲಾಗಿದೆ. ಈಶಾನ್ಯ ಕ್ವೆಟಾದಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ.

ಪಿಶಿನ್, ಹರ್ನೈ ಮತ್ತು ಬಲೂಚಿಸ್ತಾನದ ಇತರ ಪ್ರದೇಶಗಳಲ್ಲಿಯೂ ಜನರಿಗೆ ಭೂಕಂಪನದ ಅನುಭವ ಆಗಿದೆ.

‘ಈ ಭೂಕಂಪದಿಂದ ಏನಾದರೂ ಅನಾಹುತ ಸಂಭವಿಸಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ‘ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು