ಶುಕ್ರವಾರ, ಜುಲೈ 30, 2021
23 °C

ಗೂಗಲ್‌ ಕಾರ್ಯವೈಖರಿ: ತನಿಖೆಗೆ ಮುಂದಾದ ಐರೋಪ್ಯ ಒಕ್ಕೂಟ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಡಿಜಿಟಲ್‌ ಜಾಹೀರಾತು ಕ್ಷೇತ್ರದ ತಂತ್ರಜ್ಞಾನಕ್ಕೆ ಸಂಬಂಧಿಸಿ ಗೂಗಲ್‌ ಕಂಪನಿಯು ಒಕ್ಕೂಟದ ನಿಯಮಗಳನ್ನು ಪಾಲಿಸುತ್ತದೆಯೇ ಎಂಬುದರ ಕುರಿತು ತನಿಖೆ ನಡೆಸಲು ಐರೋಪ್ಯ ಒಕ್ಕೂಟ ಮುಂದಾಗಿದೆ.

ತನ್ನ ವೇದಿಕೆಗಳಿಗೆ ಜಾಹೀರಾತು ನೀಡುವ ಸಂಸ್ಥೆಗಳಿಗೆ ಹೆಚ್ಚು ಲಾಭವಾಗುವ ರೀತಿ ಗೂಗಲ್‌ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಆ ಮೂಲಕ ತನ್ನ ಪ್ರತಿಸ್ಪರ್ಧಿ ಪ್ರಕಾಶಕರಿಗೆ, ಜಾಹೀರಾತುದಾರರಿಗೆ ಹಾಗೂ ಜಾಹೀರಾತಿಗೆ ಸಂಬಂಧಿಸಿ ಡಿಜಿಟಲ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಅನನುಕೂಲವಾಗುವಂತೆ ಮಾಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಯುರೋಪಿಯನ್‌ ಕಮಿಷನ್‌ ಮಂಗಳವಾರ ಹೇಳಿದೆ.

ವಿವಿಧ ವೆಬ್‌ಸೈಟ್‌ಗಳು ಹಾಗೂ ಆ್ಯಪ್‌ಗಳಿಗೆ ನಿರ್ದಿಷ್ಟ ಬಳಕೆದಾರರು ಸಂಪರ್ಕ ಹೊಂದುವುದನ್ನು ಗೂಗಲ್‌ ತಡೆಯುತ್ತಿದೆ ಎಂಬುದು ಕಮಿಷನ್‌ನ ಆರೋಪ. ‘ಕಮಿಷನ್‌ನ ತನಿಖೆಗೆ ಸಹಕರಿಸಲಾಗುವುದು. ಅದು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗುವುದು’ ಎಂದು ಗೂಗಲ್‌ ಪ್ರತಿಕ್ರಿಯಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು