ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಫ್ಗನ್‌ನಲ್ಲಿನ ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತದೊಂದಿಗೆ ಸಮನ್ವಯ ಸಾಧಿಸಿ'

Last Updated 21 ಸೆಪ್ಟೆಂಬರ್ 2021, 6:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿನ ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತದೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸುವ ಜೊತೆಗೆ, ಈ ವಿಷಯದಲ್ಲಿ ಪಾಕಿಸ್ತಾನದ ಮೇಲಿನ ಅವಲಂಬನೆಯನ್ನು ಮರು ಮೌಲ್ಯಮಾಪನ ಮಾಡುವಂತೆ ಡೊನಾಲ್ಡ್‌ ಟ್ರಂಪ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆ ತಂಡದ ಅಧಿಕಾರಿಯಾಗಿದ್ದ ಲಿಸಾ ಕರ್ಟಿಸ್‌ ಅಮೆರಿಕವನ್ನು ಒತ್ತಾಯಿಸಿದ್ದಾರೆ.

ಜೋ ಬೈಡನ್ ಹಾಗೂ ನರೇಂದ್ರ ಮೋದಿಯವರ ನಡುವೆ ಮೊದಲ ಬಾರಿಗೆ ನಡೆಯುತ್ತಿರುವ ದ್ವಿಪಕ್ಷೀಯ ಭೇಟಿಯ ಹಿನ್ನೆಲೆಯಲ್ಲಿ ನ್ಯೂ ಅಮೆರಿಕನ್ ಸೆಕ್ಯುರಿಟಿ ಥಿಂಕ್ ಟ್ಯಾಂಕ್ ಕೇಂದ್ರದ ಭಾರತ-ಪೆಸಿಫಿಕ್ ಸೆಕ್ಯುರಿಟಿ ಪ್ರೋಗ್ರಾಂನ ನಿರ್ದೇಶಕಿ ಲಿಸಾ ಕರ್ಟಿಸ್ ಈ ರೀತಿ ಒತ್ತಾಯಿಸಿದ್ದಾರೆ.

ಭಯೋತ್ಪಾದನೆ ನಿಗ್ರಹದ ಸಹಕಾರದ ವಿಷಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಪಾಕಿಸ್ತಾನ ನಡೆದುಕೊಂಡಿರುವ ರೀತಿಯಿಂದ ಅಮೆರಿಕ ಪಾಠ ಕಲಿಯಬೇಕು. ಈ ವಿಷಯದಲ್ಲಿ ಪಾಕಿಸ್ತಾನವನ್ನು ದಂಡಿಸುವುದಕ್ಕೆ ವಿಳಂಬವಾಗಿದ್ದರೂ, ಆ ದೇಶದಿಂದ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂಬುದನ್ನು ಅರಿಯಬೇಕಿದೆ.

ಅಮೆರಿಕದಲ್ಲಿ 2001 ರಿಂದ ಆಡಳಿತ ನಡೆಸುತ್ತಿರುವ ಯಾವ ಸರ್ಕಾರವೂ ತನ್ನ ಪ್ರದೇಶದೊಳಗಿನ ತಾಲಿಬಾನ್ ಚಟುವಟಿಕೆಯನ್ನು ಹತ್ತಿಕ್ಕುವಂತೆ ಪಾಕಿಸ್ತಾನವನ್ನು ಯಶಸ್ವಿಯಾಗಿ ಮನವೊಲಿಸಲು ಸಾಧ್ಯವಾಗಲಿಲ್ಲ ಎಂದು ಲಿಸಾ ಅವರು ವಿದೇಶಾಂಗ ವ್ಯವಹಾರಗಳ ನಿಯತಕಾಲಿಕೆಯಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT