ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ್ ಸ್ಥಗಿತ: ನಮಗೂ ಆಂತರಿಕವಾಗಿ ಸಮಸ್ಯೆ ಆಗಿತ್ತು ಎಂದ ಫೇಸ್‌ಬುಕ್ ಉದ್ಯೋಗಿಗಳು

Last Updated 5 ಅಕ್ಟೋಬರ್ 2021, 9:14 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ನಿನ್ನೆ ದಿನ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಹಾಗೂ ಮೆಸೆಂಜರ್‌ಸುಮಾರು ಆರು ಗಂಟೆಗೂ ಹೆಚ್ಚು ಹೊತ್ತು ಜಗತ್ತಿನಾದ್ಯಂತ ಸ್ಥಗಿತಗೊಂಡಿದ್ದು ಬಹುತೇಕರಿಗೆ ಗೊತ್ತಿರುವ ಸಂಗತಿ.

ಇದರಿಂದ 350 ಕೋಟಿಗೂ ಹೆಚ್ಚು ಬಳಕೆದಾರರಿಗೆ ಈ ಸೇವೆಗಳನ್ನು ಬಳಸಲು ಆಗಿರಲಿಲ್ಲ. ಆದರೆ, ಫೇಸ್‌ಬುಕ್ ಉದ್ಯೋಗಿಗಳಿಗೂ ಕೂಡ ಈ ವೇಳೆ ತಮ್ಮ ಕೆಲಸದ ಖಾತೆಗಳನ್ನು (work accounts) ಲಾಗಿನ್ ಮಾಡಲು ಸಾಧ್ಯವಾಗಿರಲಿಲ್ಲ. ಅವರಿಗೂ ಸಮಸ್ಯೆ ಕಾಡಿತ್ತು ಎಂಬುದು ಸಿಎನ್‌ಎನ್‌ ಸುದ್ದಿ ಸಂಸ್ಥೆಯ ವರದಿಯಿಂದ ಬಹಿರಂಗಗೊಂಡಿದೆ.

ಫೇಸ್‌ಬುಕ್‌ನ ಕೆಲವು ಅನಾಮಧೇಯ ಉದ್ಯೋಗಿಗಳು ಈ ವಿಚಾರವನ್ನು ಸುದ್ದಿಸಂಸ್ಥೆ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿನ ಸಂಭವಿಸಿದ ಫೇಸ್‌ಬುಕ್‌ ಕಂಪನಿಯ ಅತಿದೊಡ್ಡ ಸಮಸ್ಯೆ ಕೇವಲ 350 ಕೋಟಿ ಬಳಕೆದಾರರಿಗೆ ಮಾತ್ರ ಆಗಿಲ್ಲ. ಆಂತರಿಕವಾಗಿ ಸಂಸ್ಥೆಯ ಉದ್ಯೋಗಿಗಳಿಗೂ ಆಗಿದೆ ಎಂದು ತಿಳಿದು ಬಂದಿದೆ.

‘ಇದರಿಂದ ಉದ್ಯೋಗಿಗಳಿಗೆ ಟೂಲ್ಸ್‌ಗಳನ್ನು ಬಳಸಲು ಸಾಧ್ಯವಾಗಿಲ್ಲ ಹಾಗೂ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಇದು ಒಂದು ರೀತಿ ಅಲ್ಲೋಲಕಲ್ಲೋಲ ಪರಿಸ್ಥಿತಿಯಂತಾಗಿತ್ತು’ಎಂದು ಇನ್‌ಸ್ಟಾಗ್ರಾಂಉದ್ಯೋಗಿಯೊಬ್ಬರು ಹೇಳಿದ್ದಾರೆ.

2008 ರಿಂದ ಫೇಸ್‌ಬುಕ್‌ ಸರ್ವರ್‌ನಲ್ಲಿ ಅತಿ ಹೆಚ್ಚು ಸಮಯ ವ್ಯತ್ಯಯ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

350 ಕೋಟಿಗೂ ಹೆಚ್ಚು ಜನರು ಫೇಸ್‌ಬುಕ್‌ ಮತ್ತು ಅದರ ಆ್ಯಪ್‌ಗಳನ್ನು ಬಳಸಿ ಸಂವಹನ ಹಾಗೂ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದೆ.

ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಂ ಕಳೆದ ದಿನ ಸಂಜೆಯಿಂದ ರಾತ್ರಿಯವರೆಗೆ ಕೆಲಸ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಫೇಸ್‌ಬುಕ್‌ ಸಿಇಓ ಮಾರ್ಕ್ ಜುಕರ್‌ಬರ್ಗ್ ಬಳಕೆದಾರರಲ್ಲಿ ವೈಯಕ್ತಿಕವಾಗಿ ಕ್ಷಮಾಪಣೆ ಕೇಳಿದ್ದಾರೆ.

ಈ ಕುರಿತು ಮಂಗಳವಾರ ಫೇಸ್‌ಬುಕ್‌ ಪೋಸ್ಟ್ ಹಾಕಿರುವ ಅವರು, ‘ಫೇಸ್‌ಬುಕ್‌, ಇನ್‌ಸ್ಟಾಗ್ರಾಂ , ಮೆಸೆಂಜರ್ ಹಾಗೂ ವಾಟ್ಸ್‌ಆ್ಯಪ್ಸಹಜ ಸ್ಥಿತಿಗೆ ಬಂದಿವೆ. ಈ ದಿನದ ಅನಾನುಕೂಲಕ್ಕೆ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನೀವು ನಿಮ್ಮ ಪ್ರೀತಿ ಪಾತ್ರರ ಜೊತೆ ಸಂಪರ್ಕದಲ್ಲಿರಲು ನಮ್ಮ ಸೇವೆಯ ಜೊತೆ ಎಷ್ಟೊಂದು ಸಂಬಂಧ ಹೊಂದಿದ್ದಿರಾ ಎಂಬುದನ್ನು ನಾನು ಬಲ್ಲೆ‘ ಎಂದು ಮಾರ್ಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT