ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್‌ನಲ್ಲಿ ಮಹಾತ್ಮ ಗಾಂಧಿಗೆ ಸಮರ್ಪಿಸಲಾದ ಮೊದಲ ವಸ್ತುಸಂಗ್ರಹಾಲಯಕ್ಕೆ ಚಾಲನೆ

Last Updated 11 ಅಕ್ಟೋಬರ್ 2022, 2:29 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಮಹಾತ್ಮಾ ಗಾಂಧಿಯವರ ಜೀವನ ಮತ್ತು ತತ್ವ ಪ್ರಸಾರಕ್ಕೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಯುಎಸ್‌ನ ಅಟ್ಲಾಂಟಿಕ್ ನಗರದಲ್ಲಿ ತೆರೆಯಲಾಗಿದೆ.

ಕಳೆದ ವಾರಾಂತ್ಯದಲ್ಲಿ ಉದ್ಘಾಟನೆಗೊಂಡ ಈ ವಸ್ತುಸಂಗ್ರಹಾಲಯದಲ್ಲಿ ಕಲಾಕೃತಿಗಳು ಮತ್ತು ಡಿಜಿಟಲ್ ಡಿಸ್‌ಪ್ಲೇ ಪರದೆಗಳನ್ನು ಹಾಕಲಾಗಿದೆ. ಸಂದರ್ಶಕರು ಶಾಂತಿದೂತ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ವೀಕ್ಷಿಸಬಹುದಾಗಿದೆ.

ಭಾರತೀಯ ಅಮೆರಿಕನ್‌ ಸಮುದಾಯದ ಸದಸ್ಯರು,ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಜೆರ್ಸಿ ಮೂಲದ ಗಾಂಧಿ ಸೊಸೈಟಿಯು ಆದಿತ್ಯ ಬಿರ್ಲಾ ಗ್ರೂಪ್‌ಸಹಭಾಗಿತ್ವದಲ್ಲಿ ವಸ್ತುಸಂಗ್ರಹಾಲಯವನ್ನು ತೆರೆದಿದೆ. ಇದು ಯುಎಸ್‌ನಲ್ಲಿ ಭಾರತದ 'ರಾಷ್ಟ್ರಪಿತ' ಗಾಂಧೀಜಿ ಅವರಿಗೆ ಸಮರ್ಪಿಸಲಾದ ಮೊದಲವಸ್ತುಸಂಗ್ರಹಾಲಯವಾಗಿದೆ.

ಆಧುನಿಕ ಯುಗದ ಇಬ್ಬರು ಶ್ರೇಷ್ಠ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಜೀವನ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲುಮಾರ್ಟಿನ್ ಲೂಥರ್ ಕಿಂಗ್ ಫೌಂಡೇಶನ್‌ನ ಸಹಭಾಗಿತ್ವವನ್ನು ನಿರೀಕ್ಷಿಸಲಾಗಿದೆ ಎಂದು ವಸ್ತುಸಂಗ್ರಹಾಲಯದ ಪ್ರಕಟಣೆ ತಿಳಿಸಿದೆ.

ಗಾಂಧಿ ಸೊಸೈಟಿ ಹಾಗೂ ಅದರ ಸಂಸ್ಥಾಪಕ ಭದ್ರ ಬುತಾಲ ಅವರ ಶ್ರಮವನ್ನುಶ್ಲಾಘಿಸಿರುವ ಜೈಸ್ವಾಲ್‌,ಈ ಯೋಜನೆಯನ್ನು ಯುಎಸ್‌ನಲ್ಲಿ ಸಾಕಾರಗೊಳಿಸಿದ ಬಿರ್ಲಾ ಗ್ರೂಪ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT