ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ 

Last Updated 17 ಸೆಪ್ಟೆಂಬರ್ 2020, 14:37 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಮಾಜಿ ರೂಪದರ್ಶಿ ಆಮಿ ಡೋರಿಸ್ ಈ ಆರೋಪ ಮಾಡಿದ್ದಾರೆ.

1997ರಲ್ಲಿ ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್ ಟೆನಿಸ್ ಪಂದ್ಯ ನಡೆಯುತ್ತಿದ್ದ ವೇಳೆ ವಿಐಪಿ ಕೋಣೆಯಲ್ಲಿ ಡೊನಾಲ್ಡ್ ಟ್ರಂಪ್ ತನ್ನ ಮೈ ಮುಟ್ಟಿ ಬಲವಂತವಾಗಿ ಮುತ್ತುಕೊಟ್ಟಿದ್ದಾರೆ ಎಂದು ಆಮಿ ಡೋರಿಸ್ ಆರೋಪಿಸಿರುವುದಾಗಿ ಬ್ರಿಟನ್‌ನ 'ದಿ ಗಾರ್ಡಿಯನ್' ವರದಿ ಮಾಡಿದೆ.ಆದಾಗ್ಯೂ, ಈ ಆರೋಪನ್ನು ಟ್ರಂಪ್ ತಳ್ಳಿ ಹಾಕಿದ್ದಾರೆ.

ಟ್ರಂಪ್ ಬಲವಂತವಾಗಿ ಮುತ್ತು ಕೊಟ್ಟಿದ್ದಾರೆ. ಅವರನ್ನು ಆಚೆ ತಳ್ಳಲು ನಾನು ಯತ್ನಿಸಿದಾಗ ಅವರು ನನ್ನ ಎದೆ ಭಾಗ, ಹಿಂಭಾಗ, ದೇಹದ ಎಲ್ಲ ಭಾಗಗಳನ್ನು ಮುಟ್ಟಿದ್ದಾರೆ. ಅವರ ಹಿಡಿತದಿಂದ ನನಗೆ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಎಂದು ಡೋರಿಸ್ ಸಂದರ್ಶನದಲ್ಲಿ ಹೇಳಿದ್ದಾರೆ.

ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಈ ಹಿಂದೆಯೂ ಸಾಕಷ್ಟು ಕೇಳಿ ಬಂದಿತ್ತು. 1990ರಲ್ಲಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರುಎಂದು ಅಮೆರಿಕದ ಖ್ಯಾತ ಅಂಕಣಗಾರ್ತಿ ಇ.ಜೀನ್ ಕರೋಲ್ ಆರೋಪಿಸಿದ್ದರು.

ಇದನ್ನೂ ಓದಿ:ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮತ್ತೋರ್ವ ಮಹಿಳೆ

ಟ್ರಂಪ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದಾಗ ಡೋರಿಸ್ ವಯಸ್ಸು 24 ಆಗಿತ್ತು.ಟ್ರಂಪ್ ವಯಸ್ಸು 51, ಅವರು ಎರಡನೇ ಪತ್ನಿ ಮಾರ್ಲಾ ಮಾಪಲ್ಸ್‌ನ್ನು ವಿವಾಹವಾಗಿದ್ದರು.

ಟ್ರಂಪ್ ಜತೆಗಿರುವ ಹಲವಾರು ಫೊಟೊಗಳವನ್ನು ಸಂತ್ರಸ್ತೆ ದಿ ಗಾರ್ಡಿಯನ್‌ಗೆ ನೀಡಿದ್ದಾರೆ. ತಮಗಾದ ದೌರ್ಜನ್ಯದ ಬಗ್ಗೆ ನಮ್ಮಲ್ಲಿ ಹೇಳಿದ್ದರು ಎಂದು ಡೋರಿಸ್ ಆಪ್ತರು ಹೇಳಿದ್ದಾರೆ.

2016ರ ಚುನಾವಣೆಗೆ ತುಸು ಮುನ್ನ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಟ್ರಂಪ್ ಯಾವ ರೀತಿ ತಮ್ಮ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಧ್ವನಿಮುದ್ರಿಕೆಯೊಂದು ಬಹಿರಂಗವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT