ಗುಂಡಿನ ದಾಳಿ; ನಾಲ್ವರು ಪಾಕ್ ಸೈನಿಕರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಚೆಕ್‌ಪೋಸ್ಟ್ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ನಾಲ್ವರು ಸೈನಿಕರು ಹತರಾಗಿದ್ದಾರೆ.
‘ಕೊಹ್ಲು ಜಿಲ್ಲೆಯ ಕಹಾನ ಪ್ರದೇಶದಲ್ಲಿರುವ ಜಮನ್ ಖಾನ್ ಚೆಕ್‌ಪೋಸ್ಟ್ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ನಾಲ್ಕು ಸೈನಿಕರು ಮೃತಪಟ್ಟಿದ್ದು, ಸೈನಿಕರೊಬ್ಬರಿಗೆ ಗಾಯಗಳಾಗಿವೆ’ ಎಂದು ಮೂಲಗಳು ಹೇಳಿವೆ.
ಅನಿಲ ಮತ್ತು ಖನಿಜಗಳಿಂದ ಸಂಪದ್ಭರಿತವಾಗಿರುವ ಬಲೂಚಿಸ್ತಾನದಲ್ಲಿ ಸಂಪೂರ್ಣ ಸ್ವಾಯತ್ತತೆಗಾಗಿ ದಶಕದಿಂದೀಚೆಗೆ ಪ್ರತ್ಯೇಕತಾವಾದಿಗಳು ಹೋರಾಡುತ್ತಿದ್ದು, ಅದರ ಒಂದು ಭಾಗವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.