ಗುರುವಾರ , ಮಾರ್ಚ್ 23, 2023
21 °C

ಪಾಕಿಸ್ತಾನ: ನಿಷೇಧಿತ ಟಿಟಿಪಿ ಸಂಘಟನೆಯ ನಾಲ್ವರು ಉಗ್ರರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೆಶಾವರ, ಪಾಕಿಸ್ತಾನ: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಪೊಲೀಸ್‌ ಕಾರ್ಯಾಚರಣೆಯಲ್ಲಿ ನಿಷೇಧಿತ ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಕುರ್ರಂ ಬುಡಕಟ್ಟು ಜಿಲ್ಲೆಯ ಗಡಿಯಲ್ಲಿರುವ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ತಹಸಿಲ್‌ ಥಾಲ್‌ ಆಫ್‌ ಹಂಗು ಜಿಲ್ಲೆಯಲ್ಲಿ ಭಯೋತ್ಪಾದನೆ ನಿಗ್ರಹ ಇಲಾಖೆಯ (ಸಿಟಿಡಿ) ಪೊಲೀಸ್‌ ವಿಭಾಗದವರ ಕಾರ್ಯಾಚರಣೆಗೆ ಉಗ್ರರು ಬಲಿಯಾಗಿದ್ದಾರೆ. 

ಹತ್ಯೆಗೀಡಾದ ಉಗ್ರರು ಟಿಟಿಪಿ ಸಂಘಟನೆಗೆ ಸೇರಿದವರು ಎಂದು ಸಿಟಿಡಿ ಮೂಲಗಳು ಹೇಳಿವೆ.  

ಉಗ್ರರ ಉಳಿದ ಸಹಚರರನ್ನು ಬಂಧಿಸಲು ಪೊಲೀಸರು ಈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು