ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ವಿವಿಧೆಡೆ ಗಾಂಧಿ ಜಯಂತಿ ಆಚರಣೆ

Last Updated 3 ಅಕ್ಟೋಬರ್ 2021, 7:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಹಿಂಸೆ, ಸಹಿಷ್ಣುತೆಯ ಮಹಾನ್ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ ಜನ್ಮದಿನಾಚರಣೆಯನ್ನು ಅಮೆರಿಕದಾದ್ಯಂತ ಆಚರಿಸಲಾಯಿತು.

‘ಗಾಂಧೀಜಿಯವರ 152ನೇ ಹುಟ್ಟುಹಬ್ಬವನ್ನು ಆಚರಿಸಲು ನಾವು ಭಾರತದ ನಮ್ಮ ಸ್ನೇಹಿತರೊಡನೆ ಸೇರಿಕೊಳ್ಳುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕನ್‌ ಶನಿವಾರ ಟ್ವೀಟ್‌ ಮಾಡಿದ್ದಾರೆ.

ಕಳೆದ ವಾರ ಶ್ವೇತ ಭವನದ ಓವಲ್ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಅಧ್ಯಕ್ಷ ಜೋ ಬೈಡನ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ಅವರು ನೆನಪಿಸಿಕೊಂಡರು.

‘ಗಾಂಧೀಜಿಯ ಅಹಿಂಸೆ, ಗೌರವ ಮತ್ತು ಸಹಿಷ್ಣುತೆಯ ಸಂದೇಶ ಇಂದು ಪ್ರಸ್ತುತ ಎಂದು ನಮಗೆ ನೆನಪಿಸಿದೆ’ ಎಂದು ಬ್ಲಿಂಕನ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಜಿತ್‌ ಸಿಂಗ್‌ ಸಂಧು ಅವರು ನ್ಯೂಯಾರ್ಕ್‌ನಲ್ಲಿಯ ಗಾಂಧಿ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು.

‘ಶಾಂತ ರೀತಿಯಲ್ಲಿ ಜಗತ್ತನ್ನು ಅಲುಗಾಡಿಸಬಹುದು ಎಂದು ನಮಗೆ ತೋರಿಸಿಕೊಟ್ಟ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ಹೋವರ್ಡ್‌ ವಿಶ್ವವಿದ್ಯಾಲಯದ ಬುಂಚೆ ಅಂತರರಾಷ್ಟ್ರೀಯ ಸಂಸ್ಥೆ ಹೇಳಿದೆ.

‘ಗಾಂಧೀಜಿಯ ಶಾಂತಿಯ ಪಾಠಗಳನ್ನು ಜೀವನದಲ್ಲಿ ಪಾಲಿಸಲು ಸರಿಯಾದ ಮಾರ್ಗವನ್ನು ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ’ ಎಂದು ಭಾರತೀಯ ಅಮೆರಿಕದ ಕಾಂಗ್ರೆಸ್‌ ಸದಸ್ಯ ರೋ ಖನ್ನಾ ಹೇಳಿದರು.

ಅಮೆರಿಕಕ್ಕೆ ಗಾಂಧೀಜಿ ಹೆಚ್ಚು ಪ್ರಯಾಣ ಮಾಡಿಲ್ಲ. ಆದರೆ ಇಲ್ಲಿ ಅವರ ಹೆಚ್ಚು ಪ್ರತಿಮೆಗಳಿವೆ. ಅವರ ಶಾಂತಿಯ ಬೋಧನೆಗಳು ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯನ್ನು ಪ್ರಭಾವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT