ಶನಿವಾರ, ಸೆಪ್ಟೆಂಬರ್ 25, 2021
22 °C

ಬರ್ಲಿನ್ ಗೋಡೆಗೆ 60 ವರ್ಷ: ಜರ್ಮನಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್: ಪೂರ್ವ ಮತ್ತು ಪಶ್ಚಿಮ ಜರ್ಮನಿ ಬೇರ್ಪಡಿಸಲು ಪೂರ್ವ ಜರ್ಮನ್‌ ಅಧಿಕಾರಿಗಳು ನಿರ್ಮಿಸಿದ್ದ ಬರ್ಲಿನ್‌ ಗೋಡೆಗೆ 60 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಜರ್ಮನಿಯಲ್ಲಿ ಬರ್ಲಿನ್‌ ಗೋಡೆಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಮೂರು ದಶಕಗಳಲ್ಲಿ ಪಶ್ಚಿಮ ಜರ್ಮನಿಗೆ ಪಲಾಯನ ಮಾಡಲು ಪ್ರಯತ್ನಿಸಿದ ಕನಿಷ್ಠ 140 ಜನರು ಬರ್ಲಿನ್‌ ಗೋಡೆ ಬಳಿ ಜೀವ ತೆತ್ತಿದ್ದಾರೆ.

1961ರ ಆಗಸ್ಟ್ 13ರಂದು ನಿರ್ಮಾಣ ಆರಂಭಿಸಿದ ಈ ಗೋಡೆ ಕಮ್ಯುನಿಸ್ಟ್ ಆಡಳಿತಕ್ಕೆ ‘ಅಂತ್ಯದ ಆರಂಭ’ ಎಂದು ಕರೆದಿರುವ ಜರ್ಮನಿಯ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೈನ್‌ಮೀರ್, ದೇಶವನ್ನು ಆ ಸಮಯದಲ್ಲಿ ಫ್ಯಾಸಿಸಂನಿಂದ ರಕ್ಷಿಸಲು ಬರ್ಲಿನ್‌ ಗೋಡೆಯನ್ನು ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಬರ್ಲಿನ್ ಗೋಡೆಯು 155 ಕಿಲೋಮೀಟರ್ (96 ಮೈಲಿ)ವರೆಗೆ ವಿಸ್ತರಿಸಿ, ಈ ಗೋಡೆ ಪಶ್ಚಿಮ ಬರ್ಲಿನ್ ಅನ್ನು 1989 ರವರೆಗೆ ಸುತ್ತುವರಿದಿತ್ತು. ಗೋಡೆ ದಾಟಲು ಜನರು ಸಾಮೂಹಿಕ ಪ್ರತಿಭಟನೆಗಳನ್ನು ಅನುಸರಿಸಿದ ನಂತರ ಪೂರ್ವ ಜರ್ಮನಿಯ ಅಧಿಕಾರಿಗಳು ಅನಿವಾರ್ಯವಾಗಿ ಗೋಡೆಯ ಗೇಟುಗಳನ್ನು ತೆರೆದರು. ಒಂದು ವರ್ಷದೊಳಗೆ, ಪೂರ್ವ ಮತ್ತು ಪಶ್ಚಿಮ ಜರ್ಮನಿ ಮತ್ತೆ ಒಂದಾದವು.

ಆ ಅವಧಿಯ ನೆನಪುಗಳು ಮಸುಕಾಗದಂತೆ ಜರ್ಮನರನ್ನು ಸ್ಮರಿಸಿಕೊಂಡ ಸ್ಟೈನ್‌ಮೀರ್, ಮುಂದಿನ ತಿಂಗಳು ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜನರಿಗೆ ಕರೆ ನೀಡಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು