ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಾಸ್ಕಾ: ಹೆಲಿಕಾಪ್ಟರ್ ಅಪಘಾತದಲ್ಲಿ ಐವರ ಸಾವು

Last Updated 29 ಮಾರ್ಚ್ 2021, 6:14 IST
ಅಕ್ಷರ ಗಾತ್ರ

ಆಂಕರೇಜ್ (ಅಮೆರಿಕ): ಅಲಸ್ಕಾದ ಹೊರವಲಯದ ಹಿಮ ಪರ್ವತಗಳಿಂದ ಕೂಡಿರುವ ‘ಸ್ಕೀಯಿಂಗ್‌’ ಪ್ರವಾಸಿ ತಾಣಕ್ಕೆ ಪ್ರವಾಸಿಗರನ್ನು ಮತ್ತು ಮಾರ್ಗದರ್ಶಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ, ಪೈಲಟ್‌ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆಂಕರೇಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ಶನಿವಾರ ಈ ದುರಂತ ಸಂಭವಿಸಿದ್ದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರಲ್ಲಿ ಕೊಲೊರಾಡೊದ ಒಬ್ಬರು, ಜೆಕ್‌ ಗಣರಾಜ್ಯದ ಮತ್ತು ಅಲಸ್ಕಾದ ತಲಾ ಇಬ್ಬರು ಸೇರಿದ್ದಾರೆ. ಮೂವರು ಪ್ರವಾಸಿಗರು ಮತ್ತು ಇಬ್ಬರು ಮಾರ್ಗದರ್ಶಕರನ್ನು ಒಳಗೊಂಡ ಹೆಲಿಕಾಪ್ಟರ್‌ ಪ್ರವಾಸ ತಾಣದತ್ತ ಹೊರಟಿದ್ದಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT