ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಕುಡಿಯುವ ನೀರು ತರಲು ಮಸೀದಿಗೆ ಹೋಗಿದ್ದ ಹಿಂದೂ ಕುಟುಂಬದವರಿಗೆ ಕಿರುಕುಳ

Last Updated 20 ಸೆಪ್ಟೆಂಬರ್ 2021, 7:38 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಮಸೀದಿಯೊಂದರಿಂದ ಕುಡಿಯುವ ನೀರು ತಂದಿದ್ದಕ್ಕಾಗಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಬಡ ರೈತ ಕುಟುಂಬ ತೊಂದರೆಗೆ ಸಿಲುಕಿದೆ.

ಧಾರ್ಮಿಕ ಸ್ಥಳದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದು ಆರೋಪಿಸಿ ಕೆಲವರು ಕುಟುಂಬ ಸದಸ್ಯರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಕಿರುಕುಳ ನೀಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕುಟುಂಬದ ಸದಸ್ಯರು ಸಮೀಪದ ಮಸೀದಿಯ ನೆಲ್ಲಿಯಿಂದ ನೀರು ತರಲು ಹೋದಾಗ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿರುವುದಾಗಿ ಅಲಾಂ ರಾಮ್‌ ಭೀಲ್‌ ಅವರು ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಹೊಲದಲ್ಲಿ ಕೆಲಸ ಮುಗಿಸಿ ಬರುವಾಗಲೂ ಕುಟುಂಬ ಸದಸ್ಯರನ್ನು ಅಡ್ಡಗಟ್ಟಿದ ಕೆಲವರು ಅವರನ್ನು ತಮ್ಮ ಮನೆ ಬಳಿ ಕರೆದುಕೊಂಡು ಹೋಗಿ ಒತ್ತೆಯಾಗಿರಿಸಿಕೊಂಡು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಹಲ್ಲೆ ಮಾಡಿದವರು ಆಡಳಿತಾರೂಢ ಪಿಟಿಐ ಪಕ್ಷಕ್ಕೆ ಸೇರಿದ್ದರಿಂದ ಅವರ ವಿರುದ್ಧ ಪೊಲೀಸರೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಭೀಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT