ಶನಿವಾರ, ಆಗಸ್ಟ್ 20, 2022
21 °C

ಹಿಂದೂ ವಿಧವೆಗೆ ಪತಿಯ ಆಸ್ತಿಯಲ್ಲಿ ಪಾಲು: ಬಾಂಗ್ಲಾ ನ್ಯಾಯಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಬಾಂಗ್ಲಾದೇಶದಲ್ಲಿನ ಹಿಂದೂ ವಿಧವೆ ತನ್ನ ಪತಿಯ ಕೃಷಿ ಹಾಗೂ ಕೃಷಿಯೇತರ ಭೂಮಿಯಲ್ಲಿ ಪಾಲು ಪಡೆಯುವ ಹಕ್ಕನ್ನು ಹೊಂದಲಿದ್ದಾರೆ ಎಂದು ಬಾಂಗ್ಲಾದೇಶ ಹೈಕೋರ್ಟ್‌ ಬುಧವಾರ ಆದೇಶಿಸಿದೆ ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ. 

ಪ್ರಸ್ತುತ ಬಾಂಗ್ಲಾದೇಶದಲ್ಲಿ ಇರುವ ನಿಯಮದಂತೆ ಹಿಂದೂ ವಿಧವೆಯರು ತಮ್ಮ ಪತಿಯ ಮನೆಯನ್ನಷ್ಟೇ ಪಡೆಯುವ ಹಕ್ಕು ಹೊಂದಿದ್ದಾರೆ. ಇವರಿಗೆ ಪತಿಯ ಇತರೆ ಆಸ್ತಿಗಳಲ್ಲಿ ಯಾವುದೇ ಹಕ್ಕು ಇರಲಿಲ್ಲ. ‘ಕೃಷಿ ಭೂಮಿ ಹಾಗೂ ಕೃಷಿಯೇತರ ಭೂಮಿ ಎಂದು ಯಾವುದೇ ಪ್ರತ್ಯೇಕವಿಲ್ಲ. ಹಿಂದೂ ವಿಧವೆಯರು ತಮ್ಮ ಪತಿಯ ಭೂಮಿಯಲ್ಲೂ ಹಕ್ಕು ಹೊಂದಲಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಕಾನೂನಾತ್ಮಕ ಅಗತ್ಯಗಳಿಗೆ ಈ ಭೂಮಿಯನ್ನು ಮಾರಾಟ ಮಾಡುವ ಹಕ್ಕನ್ನೂ ಪಡೆಯಲಿದ್ದಾರೆ’ ಎಂದು ಜ್ಯೋತೀಂದ್ರನಾಥ್‌ ಮೊಂಡಲ್‌ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಆದೇಶಿಸಿದೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು