ಭಾನುವಾರ, ಮೇ 22, 2022
21 °C
ಜನರ ಗಮನ ಸೆಳೆಯುವ ತಂತ್ರ: ಟ್ರಂಪ್‌ ಪರ ವಕೀಲರ ತಿರುಗೇಟು

ವಾಗ್ದಂಡನೆ ಎದುರಿಸಲು ಟ್ರಂಪ್‌ಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜ.6ರಂದು ನಡೆದ ಕ್ಯಾಪಿಟಲ್‌ ಹಿಲ್‌ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆ ಎದುರಿಸುವಂತೆ ಸಂಸತ್‌ನಲ್ಲಿ ಈ ಪ್ರಕ್ರಿಯೆ ನಿರ್ವಹಿಸುವ ವ್ಯವಸ್ಥಾಪಕರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸೂಚಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಟ್ರಂಪ್‌ ಪರ ವಕೀಲರು, ‘ಇದು ಜನರ ಗಮನವನ್ನು ಸೆಳೆಯುವ ತಂತ್ರ’ ಎಂದಿದ್ದಾರೆ. 

ವಾಗ್ದಂಡನೆ ಪ್ರಕ್ರಿಯೆ ನೆರವೇರಿಸುವ ತಂಡದ ವ್ಯವಸ್ಥಾಪಕರಾದ ಜೇಮಿ ರಸ್ಕಿನ್‌ ಈ ಸಂಬಂಧ ಟ್ರಂಪ್‌ ಅವರಿಗೆ ಪತ್ರ ಬರೆದಿದ್ದಾರೆ. ‘ಜ.6ರ ಘಟನೆಯನ್ನು ನಿಭಾಯಿಸಿದಕ್ಕೆ ಸಂಬಂಧಿಸಿದಂತೆ ವಾಗ್ದಂಡನೆ ನಿರ್ಣಯ ಮಂಡನೆಯಾಗುವ ಮೊದಲು ಅಥವಾ ಟ್ರಯಲ್‌ ನಡೆಯುತ್ತಿರುವ ಸಂದರ್ಭದಲ್ಲಿ ಹೇಳಿಕೆ ದಾಖಲಿಸುವಂತೆ’ ಪತ್ರದಲ್ಲಿ ಸೂಚಿಸಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್‌ ಪರ ವಕೀಲರಾದ ಬ್ರೂಸ್‌ ಕ್ಯಾಸ್ಟರ್‌ ಹಾಗೂ ಡೇವಿಡ್‌ ಅವರು, ‘ಅಮೆರಿಕದ ಮಾಜಿ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಮಂಡಿಸುವುದೇ ಅಸಾಂವಿಧಾನಿಕ. ಅವರು ಈಗ ಈ ದೇಶದ ಸಾಮಾನ್ಯ ಪ್ರಜೆ ಮಾತ್ರ. ಅವರ ವಿರುದ್ಧದ ಆರೋಪಗಳನ್ನು ಸಾಬೀತು ಮಾಡಲು ನಿಮ್ಮಿಂದ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು