ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹತೆ ವಿರುದ್ಧ ಇಮ್ರಾನ್ ಖಾನ್ ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಗಬಹುದು: ವರದಿ

Last Updated 22 ಅಕ್ಟೋಬರ್ 2022, 11:25 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ತಮ್ಮನ್ನು ಅನರ್ಹಗೊಳಿಸಿಚುನಾವಣಾ ಆಯೋಗವು ನೀಡಿರುವ ಆದೇಶದ ವಿರುದ್ಧ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಸುದೀರ್ಘ ಕಾನೂನು ಹೋರಾಟ ನಡೆಸಬೇಕಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿದೇಶಗಳ ನಾಯಕರು ನೀಡಿದ ಉಡುಗೊರೆಗಳ ಮಾರಾಟದಿಂದ ದೊರೆತ ಆದಾಯದ ಮಾಹಿತಿ ಬಚ್ಚಿಟ್ಟು, ಸುಳ್ಳು ಅಫಿಡವಿಟ್‌ ಸಲ್ಲಿಸಿದ ಆರೋಪದಲ್ಲಿ ಇಮ್ರಾನ್‌ ಅವರನ್ನು ಐದು ವರ್ಷಗಳವರೆಗೆ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶಿಸಿತ್ತು.

ಇದರಂತೆ ಇಮ್ರಾನ್‌ ಅವರು ಐದು ವರ್ಷಗಳ ಕಾಲ ಸಂಸತ್‌ ಸದಸ್ಯರಾಗುವಂತಿಲ್ಲ. ಸರ್ಕಾರದ ಯಾವುದೇ ಹುದ್ದೆಯನ್ನೂ ಹೊಂದುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT