ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಇಮ್ರಾನ್‌ಖಾನ್‌ 5 ವರ್ಷ ಅನರ್ಹ

Last Updated 21 ಅಕ್ಟೋಬರ್ 2022, 12:51 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ವಿದೇಶಗಳ ನಾಯಕರು ನೀಡಿದ ಉಡುಗೊರೆಗಳ ಮಾರಾಟದಿಂದ ದೊರೆತ ಆದಾಯದ ಮಾಹಿತಿ ಬಚ್ಚಿಟ್ಟು, ಸುಳ್ಳು ಅಫಿಡವಿಟ್‌ ಸಲ್ಲಿಸಿದ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಐದು ವರ್ಷಗಳವರೆಗೆ ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.

ಇಮ್ರಾನ್‌ ಖಾನ್‌ ಐದು ವರ್ಷಗಳ ಕಾಲ ಸಂಸತ್‌ ಸದಸ್ಯರಾಗುವಂತಿಲ್ಲ. ಸರ್ಕಾರದ ಯಾವುದೇ ಹುದ್ದೆಯನ್ನು ಹೊಂದುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ಐವರು ಸದಸ್ಯರ ಪೀಠ ಸರ್ವಾನುಮತದ ಆದೇಶ ನೀಡಿದೆ.

ಭ್ರಷ್ಟಾಚಾರ ತಡೆ ಕಾನೂನುಗಳಡಿ ಖಾನ್‌ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ಪೀಠ ಹೇಳಿದೆ. ಇದರಿಂದ ಪಾಕಿಸ್ತಾನ್‌ ತೆಹ್ರಿಕ್‌ –ಇ– ಇನ್ಸಾಫ್‌ (ಪಿಟಿಐ) ಪಕ್ಷದ ಅಧ್ಯಕ್ಷರೂ ಆದ ಇಮ್ರಾನ್‌ ಖಾನ್‌ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಆಯೋಗದ ಈ ಆದೇಶವನ್ನು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದುಪಿಟಿಐಪಕ್ಷದ ಪ್ರಧಾನ ಕಾರ್ಯದರ್ಶಿ ಅಸಾದ್ ಉಮರ್ ಪ್ರತಿಕ್ರಿಯಿಸಿದ್ದಾರೆ.

‘ಆಯೋಗದ ಈ ಆದೇಶ ಸ್ವೀಕಾರ್ಹವಲ್ಲ’ ಎಂದಿರುವ ಪಕ್ಷದ ನಾಯಕ ಫವಾದ್ ಚೌಧರಿ, ಇದರ ವಿರುದ್ಧ ಪ್ರತಿಭಟನೆ ನಡೆಸುವಂತೆ ಖಾನ್‌ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT