ವಾಷಿಂಗ್ಟನ್:ಆರ್ಥಿಕತೆ ಮೇಲೆ ಕೋವಿಡ್ನ ಪರಿಣಾಮ ತೀವ್ರವಾಗಿರುವ ಅವಧಿಯಲ್ಲಿ 'ಭಾರತೀಯ ಚಿಂತನೆಗಳ ಶೃಂಗಸಭೆ’ ಏರ್ಪಡಿಸಲಾಗಿದೆ. ಇದು, ‘ಚೇತರಿಕೆಯಿಂದ ಪುನರುತ್ಥಾನ’ ವಿಷಯ ಕೇಂದ್ರಿತವಾಗಿದೆ. ಈ ಶೃಂಗಸಭೆಯಲ್ಲಿಭಾರತ ಮತ್ತು ಅಮೆರಿಕದ ಪ್ರಮುಖ ನಾಯಕರು ಭಾಗವಹಿಸುವರು ಎಂದು ಆಯೋಜಕರು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ವಿಶೇಷ ಪ್ರತಿನಿಧಿ (ಜಾಗತಿಕ ತಾಪಮಾನ) ಜಾನ್ ಕೆರ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್, ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾಗವಹಿಸುವ ಪ್ರಮುಖರು. ಅಮೆರಿಕದ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರೂ ಮುಖ್ಯ ಭಾಷಣಕಾರರಲ್ಲಿ ಒಬ್ಬರಾಗಿದ್ದಾರೆ.

ಅಕ್ಟೋಬರ್ 6 ಮತ್ತು 7ರಂದು ಈ ಶೃಂಗಸಭೆಯು ಇಲ್ಲಿ ನಡೆಯಲಿದ್ದು, ಅಮೆರಿಕ – ಭಾರತ ವಾಣಿಜ್ಯ ಮಂಡಳಿ (ಯುಎಸ್ಐಬಿಸಿ) ಇದನ್ನು ಆಯೋಜಿಸಿದೆ.

ಚೇತರಿಕೆಯಿಂದ ಪುನರುತ್ಥಾನ ವಿಷಯ ಕೇಂದ್ರಿತ ಸಭೆಯು ಜಾಗತಿಕ ಆರ್ಥಿಕತೆಯ ಚೇತರಿಕೆಯ ಮಹತ್ವ ಹಾಗೂ ಆರೋಗ್ಯ ಕ್ಷೇತ್ರದ ಸವಾಲುಗಳು, ತಂತ್ರಜ್ಞಾನದ ಬೆಳವಣಿಗೆ ಕುರಿತು ಚರ್ಚೆಯನ್ನು ಕೇಂದ್ರೀಕರಿಸಲಿದೆ ಎಂದು ಯುಎಸ್ಐಬಿಸಿ ಅಧ್ಯಕ್ಷೆನಿಶಾ ದೇಸಾಯಿ ಬಿಸ್ವಾಲ್ ಅವರು ತಿಳಿಸಿದರು.

‘ಜಾಗತಿಕ ತಾಪಮಾನದ ಪರಿಣಾಮ ಎದುರಿಸುವ ಸಹಭಾಗಿತ್ವದ ಸವಾಲುಗಳು ಮತ್ತು ಅವಕಾಶಗಳು’ ಈ ಸಭೆಯಲ್ಲಿ ಹೆಚ್ಚು ಗಮನಹರಿಸಲಿರುವ ಇನ್ನೊಂದು ಮುಖ್ಯ ವಿಷಯವಾಗಿದೆ ಎಂದೂ ಬಿಸ್ವಾಲ್ ಹೇಳಿದರು.

ಕೋವಿಡ್ ಪರಿಸ್ಥಿತಿಯ ನಂತರದ ವಾತಾವರಣಕ್ಕೆ ಜಗತ್ತು ಈಗ ಮರಳುತ್ತಿದೆ. ಲಸಿಕೆ ಉತ್ಪಾದನೆಯ ಸಹಭಾಗಿತ್ವದಿಂದ ಡಿಜಿಟಲ್ ಬಾಂಧವ್ಯವರೆಗೆ ಎರಡೂ ರಾಷ್ಟ್ರಗಳನ್ನು ಅನ್ವೇಷಣೆಯ ಮುಂಚೂಣಿಯಲ್ಲಿರುವ ರಾಷ್ಟ್ರಗಳು ಎಂದೇ ಯುಎಸ್ಐಬಿಸಿಯು ಪರಿಗಣಿಸಲಿದೆ ಎಂದು ಅವರು ಹೇಳಿದರು.

ಉತ್ಪಾದನಾ ಆರ್ಥಿಕತೆಗೆ ಪೂರಕವಾದ ವಾತಾವರಣ ನಿರ್ಮಿಸುವುದು, ಉಭಯ ದೇಶಗಳಿಂದ ರಾಜಕೀಯ ಮತ್ತು ಕಾರ್ಪೊರೇಟ್ ನಾಯಕರ ಒಗ್ಗೂಡಿಸುವುದು ಈ ಮೂಲಕ ಚೇತರಿಕೆಗೆ ಪೂರಕವಾದ ಉತ್ಪಾದನಾ ವಾತಾವರಣವನ್ನು ನಿರ್ಮಿಸಲು ಒತ್ತು ನೀಡುವುದು ಸಭೆಯ ಗುರಿಯಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.