ಪರಮಾಣು ಕಾರ್ಯಕ್ರಮ ಪರಿಶೀಲನೆಗೆ ಇರಾನ್ ಸಹಕರಿಸಲಿ: ಭಾರತ ಒತ್ತಾಯ

ವಿಶ್ವಸಂಸ್ಥೆ: ಪರಮಾಣು ಕಾರ್ಯಕ್ರಮಗಳಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ(ಐಎಇಎ) ಕೈಗೊಳ್ಳುವ ಪರಿಶೀಲನಾ ಕಾರ್ಯಗಳಿಗೆ ಇರಾನ್ ಸಹಕರಿಸಬೇಕು ಎಂದು ಭಾರತ ಹೇಳಿದೆ.
ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ‘ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಮತ್ತು ನಿರ್ಣಯ– 2231’ ಅನ್ನು ಪೂರ್ಣ ಪ್ರಮಾಣದಲ್ಲಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಭಾರತ ಬೆಂಬಲ ನೀಡುತ್ತದೆ‘ ಎಂದು ಹೇಳಿದರು.
ಇರಾನ್ ಪರಮಾಣು ಒಪ್ಪಂದ ಎಂದು ಕರೆಯಲಾಗುವ ‘ಜೆಸಿಪಿಒಎ’ ಎಂಬುದು ಇರಾನ್ ಮತ್ತು ‘ಪಿ 5+1’ ರಾಷ್ಟ್ರಗಳು (ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಹಾಗೂ ಜರ್ಮನಿ) ಹಾಗೂ ಐರೋಪ್ಯ ಒಕ್ಕೂಟದ ನಡುವೆ 2015ರ ಜುಲೈ 14ರಂದು ವಿಯೆನ್ನಾದಲ್ಲಿ ಏರ್ಪಟ್ಟ ಒಪ್ಪಂದವಾಗಿದೆ.
‘ಎಲ್ಲ ದೇಶಗಳ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ಒಪ್ಪಂದದಡಿ ಕೈಗೊಂಡ ನಿರ್ಣಯಗಳನ್ನು ಸಂಬಂಧಪಟ್ಟ ಎಲ್ಲ ರಾಷ್ಟ್ರಗಳು ಜಾರಿಗೊಳಿಸಬೇಕು ಎಂದು ಭಾರತ ಒತ್ತಾಯಿಸುತ್ತದೆ’ ಎಂದೂ ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.