ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಭೇಟಿಯಿಂದ ವ್ಯಾಪಾರ ಸಂಬಂಧ ವೃದ್ಧಿ: ಬೋರಿಸ್ ಜಾನ್ಸನ್‌

Last Updated 20 ಏಪ್ರಿಲ್ 2022, 14:44 IST
ಅಕ್ಷರ ಗಾತ್ರ

ಲಂಡನ್: ಭಾರತಕ್ಕೆ ತಾವು ಕೈಗೊಳ್ಳಲಿರುವ ಪ್ರವಾಸದಿಂದ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು, ಮತ್ತು ಉಭಯ ದೇಶಗಳ ನಡುವಿನ ಸಂಬಂಧವು ಮತ್ತಷ್ಟು ವೃದ್ಧಿಯಾಗಲಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೇಳಿದ್ದಾರೆ.

ಬುಧವಾರ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, 'ಗುರುವಾರ ಗುಜರಾತ್‌ನ ಅಹಮದಾಬಾದ್ ಭೇಟಿ ಮುಖಾಂತರ ತಮ್ಮ 2 ದಿನಗಳ ಭಾರತದ ಪ್ರವಾಸವು ಆರಂಭವಾಗಲಿದೆ. ಬಳಿಕ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದೇನೆ. ಈ ವೇಳೆ ಬ್ರಿಟನ್‌ನಲ್ಲಿ ಹೂಡಿಕೆ ಮಾಡುವ ಭಾರತದ ಉದ್ಯಮಿಗಳನ್ನು ಭೇಟಿ ಮಾಡಲಿದ್ದೇನೆ' ಎಂದರು.

ಶುಕ್ರವಾರ ಪ್ರಧಾನಿ ಮೋದಿ ಹಾಗೂ ಬೋರಿಸ್ ಜಾನ್ಸನ್ ಅವರ ಜತೆಗಿನ ದ್ವಿಪಕ್ಷೀಯ ಮಾತುಕತೆ ವೇಳೆ ರಷ್ಯಾ-ಉಕ್ರೇನ್ ಯುದ್ಧವು ಚರ್ಚೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೋರಿಸ್ ವಿರುದ್ಧ ತನಿಖೆಗೆ ಪ್ರತಿಪಕ್ಷಗಳ ಒತ್ತಾಯ:

ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿದ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆ ಪ್ರತಿಪಕ್ಷ ಲೇಬರ್ ಪಕ್ಷವು, ಸಂಸದೀಯ ತನಿಖೆಗೆ ಒತ್ತಾಯಿಸಿದೆ. ಈ ಕುರಿತಾದ ನಿರ್ಣಯವನ್ನು ಗುರುವಾರ ಮತಕ್ಕೆ ಹಾಕಲಾಗುತ್ತದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬೋರಿಸ್ ಜಾನ್ಸನ್ ಅವರು ದಂಡ ತೆತ್ತಿದ್ದರು. ಜೊತೆಗೆ ಸಂಸತ್ತಿನ ಕ್ಷಮಾಪಣೆಯನ್ನೂ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT