ಸೋಮವಾರ, ಆಗಸ್ಟ್ 8, 2022
22 °C

ಭಾರತೀಯ ಅಮೆರಿಕನ್ ರಾಸಾಯನಶಾಸ್ತ್ರಜ್ಞೆಗೆ ಯುರೋಪಿಯನ್ ಇನ್ವೆಂಟರ್ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಭಾರತೀಯ ಅಮೇರಿಕನ್ ರಾಸಾಯನಶಾಸ್ತ್ರಜ್ಞೆ ಸುಮಿತಾ ಮಿತ್ರ ಅವರಿಗೆ ಯುರೋಪಿನ ಪ್ರತಿಷ್ಠಿತ ಇನ್ವೆಂಟರ್ ಪ್ರಶಸ್ತಿ ಅರಸಿ ಬಂದಿದೆ.

ಯುರೋಪಿಯನ್ ಪೇಟೆಂಟ್ ಆಫೀಸ್ (ಇಪಿಒ) ಹೊರತುಪಡಿಸಿದ ದೇಶಗಳ ವಿಭಾಗದಲ್ಲಿ ಮಿತ್ರ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ದಂತವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನದ ನ್ಯಾನೋ ಕ್ಲಸ್ಟರ್‌ ಬಳಸಬಹುದೆನ್ನುವುದನ್ನು ಇವರು ಕಂಡುಕೊಂಡಿದ್ದು, ಇವರ ತಂತ್ರಜ್ಞಾನವನ್ನು ಇಂದು ವಿಶ್ವದಾದ್ಯಂತ ದಂತವೈದ್ಯರು ಬಳಸುತ್ತಿದ್ದಾರೆ.

ಈ ಸಂಶೋಧಕರು ಕಂಡುಹಿಡಿದಿರುವ ನ್ಯಾನೊಕ್ಲಸ್ಟರ್‌ಗಳನ್ನು ದಂತಕುಳಿಯ ಭರ್ತಿಯಲ್ಲಿ ಬಳಸಿದರೆ ದೃಢವಾದ, ಬಾಳಿಕೆ ಬರುವ ಮತ್ತು ಕಲಾತ್ಮಕವಾಗಿಯೂ ಕಾಣುವಂತಿರುತ್ತವೆ ಎಂದು ಯುರೋಪಿಯನ್ ಪೇಟೆಂಟ್ ಆಫೀಸ್ (ಇಪಿಒ) ಹೇಳಿಕೆಯಲ್ಲಿ ತಿಳಿಸಿದೆ.

‘ಸುಮಿತಾ ಮಿತ್ರ ತನ್ನ ಕ್ಷೇತ್ರದಲ್ಲಿ ಸಂಪೂರ್ಣ ಹೊಸ ಹಾದಿ ಸಂಶೋಧಿಸಿದ್ದಾರೆ. ಪೇಟೆಂಟ್‌ಗಳಿಂದ ರಕ್ಷಿಸಲ್ಪಟ್ಟ ತಾಂತ್ರಿಕ ಆವಿಷ್ಕಾರವು ಒಂದು ವಲಯವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.ಇದು ಲಕ್ಷಾಂತರ ದಂತ ರೋಗಿಗಳಿಗೆ ಪ್ರಯೋಜನವಾಗಲಿದೆ. ಅವರ ಆವಿಷ್ಕಾರವು ಪ್ರಾರಂಭವಾದ 20 ವರ್ಷಗಳ ನಂತರ ವಾಣಿಜ್ಯಾತ್ಮಕವಾಗಿಯೂ ಯಶಸ್ವಿಯಾಗಿದೆ.  ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ’ ಎಂದು ಇಪಿಒ ಅಧ್ಯಕ್ಷ ಆಂಟೋನಿಯೊ ಕ್ಯಾಂಪಿನೋಸ್ ಪ್ರಶಂಸಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು