ಬೆಂಗಳೂರಿನಲ್ಲಿ ಓದಿದ ಧರ್ಮಗುರು ಇನ್ನು ಇಂಗ್ಲೆಂಡ್‌ನಲ್ಲಿ ಬಿಷಪ್

ಲಂಡನ್: ದಕ್ಷಿಣ ಭಾರತದ ಸಿರಿಯನ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಅಧ್ಯಯನ ನಡೆಸಿದ ರೆವರೆಂಡ್ ಲುಕೋಸ್ ವರ್ಗೀಸ್ ಮುಥಲಾಳಿ (ಸಾಜು ಎಂದೇ ಖ್ಯಾತರು) ಅವರನ್ನು ಮಧ್ಯ ಇಂಗ್ಲೆಂಡ್‌ನ ಲೌಗ್‌ಬೊರೌಗ್‌ನ ನೂತನ ಬಿಷಪ್ ಆಗಿ ನೇಮಿಸಲಾಗಿದೆ.
ಇವರು ಇಂಗ್ಲೆಂಡ್‌ನ ರೋಚೆಸ್ಟರ್ ಡಯಾಸಿಸ್‌ನಲ್ಲಿರುವ ಸೇಂಟ್ ಮಾರ್ಕ್ಸ್ ಗಿಲ್ಲಿಂಗ್‌ಹ್ಯಾಮ್ ಚರ್ಚ್‌ನಲ್ಲಿ ವಿಕಾರ್ ಆಗಿದ್ದು, ಮುಂದಿನ ವರ್ಷ ಬಿಷಪ್ ಆಗಿ ಅಧಿಕಾರ ವಹಿಸಲಿದ್ದಾರೆ. 42 ವರ್ಷದ ಸಾಜು ಅವರು ಈ ಹುದ್ದೆ ಅಲಂಕರಿಸಲಿರುವ ಅತಿ ಕಿರಿಯ ಬಿಷಪ್ ಎಂದು ಹೇಳಲಾಗಿದೆ.
ಲೀಸೆಸ್ಟರ್ ಡಯಾಸಿಸ್‌ಗೆ ಬಿಷಪ್ ಆಗಲಿರುವ ಅವರ ನೇಮಕವನ್ನು ರಾಣಿ ಎರಡನೇ ಎಲೆಜಬೆತ್ ಅನುಮೋದಿಸಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಪ್ರಕಟಣೆ ತಿಳಿಸಿದೆ.
ಸಾಜು ಅವರು ಬೆಂಗಳೂರಿನ ಸದರ್ನ್ ಏಷ್ಯಾ ಬೈಬಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ್ದರು.2009ರಲ್ಲಿ ಇಂಗ್ಲೆಂಡ್‌ನಲ್ಲಿ ಧರ್ಮಗುರುವಾಗಿ ಸೇವೆ ಆರಂಭಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.