ದುಬೈನಲ್ಲಿ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

ದುಬೈ: ಅಬುಧಾಬಿಯ ಯಾಸ್ ದ್ವೀಪದ ಸಮೀಪದಲ್ಲಿ ಬುಧವಾರ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇಬಾದ್ ಅಜ್ಮಲ್ (19) ಮೃತಪಟ್ಟ ವಿದ್ಯಾರ್ಥಿ. ಇವರು ಕೇರಳದ ಕಣ್ಣೂರು ಜಿಲ್ಲೆಯವರು.
ಅಪಘಾತ ಸಂಭವಿಸಿದ ವೇಳೆ ಅಜ್ಮಲ್ ಒಬ್ಬರೇ ಕಾರು ಚಲಾವಣೆ ಮಾಡುತ್ತಿದ್ದರು ಎಂದು ಖಲಿಜಾ ಟೈಮ್ಸ್ ವರದಿ ಮಾಡಿದೆ. ಕಳೆದ ತಿಂಗಳಷ್ಟೇ ಅಜ್ಮಲ್ ಕೇರಳದ ಕಣ್ಣೂರಿಗೆ ಬಂದು ಹೋಗಿದ್ದರು.
ಅಬುಧಾಬಿ ಇಂಡಿಯನ್ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಇಬಾದ್, ಬ್ರಿಟನ್‌ನ ಸೌತ್ ವೇಲ್ಸ್ ಕಾರ್ಡಿಫ್ ಕ್ಯಾಂಪಸ್‌ನಲ್ಲಿ ‘ವೈಮಾನಿಕ ಎಂಜಿನಿಯರಿಂಗ್ ಮತ್ತು ನಿರ್ವಹಣಾ ವ್ಯವಸ್ಥೆ‘ ವಿಷಯದಲ್ಲಿ ಪದವಿ ಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.