ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದಲ್ಲಿ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

Last Updated 27 ನವೆಂಬರ್ 2022, 13:45 IST
ಅಕ್ಷರ ಗಾತ್ರ

ಟೊರೊಂಟೊ: ಸೈಕಲ್‌ ಮೂಲಕ ರಸ್ತೆ ದಾಟುವಾಗ ಟ್ರಕ್‌ ಡಿಕ್ಕಿ ಹೊಡೆದು ಎಳೆದೊಯ್ದ ಪರಿಣಾಮ ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯ ಗುರುತನ್ನು ಪೊಲೀಸರು ಖಚಿತಪಡಿಸಿಲ್ಲ. ಆದರೆ ‘ಸಿಬಿಎ.ಸಿಎ’ ಸುದ್ದಿ ವೆಬ್‌ಸೈಟ್‌ ಸಂಸ್ಥೆಯು ಮೃತ ವಿದ್ಯಾರ್ಥಿ ಹರಿಯಾಣ ಮೂಲದ ಕಾರ್ತಿಕ್‌ ಸೈನಿ ಎಂದು ಗುರುತಿಸಿದೆ. ಈತ 2021ರ ಆಗಸ್ಟ್‌ನಲ್ಲಿ ಭಾರತದಿಂದ ಕೆನಡಾಗೆ ಬಂದಿದ್ದರು ಎಂದು ವಿದ್ಯಾರ್ಥಿಯ ಸಹೋದರ ಸಂಬಂಧ ಪರ್ವೀನ್‌ ಸೈನಿ ತಿಳಿಸಿದ್ದಾಗಿ ವೆಬ್‌ಸೈಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT