ಶನಿವಾರ, ಜೂನ್ 19, 2021
27 °C
ಭಾರತದಲ್ಲಿನ ಕೋವಿಡ್‌–19 ಪ‍ರಿಸ್ಥಿತಿ ಕುರಿತು ಚರ್ಚೆ

ಡಾ.ಫೌಸಿ ಜತೆ ಭಾರತದ ರಾಯಭಾರಿ ಸಂಧು ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿನ ಭಾರತದ ರಾಯಭಾರಿ ತಾರಾಂಜಿತ್‌ ಸಿಂಗ್‌ ಸಂಧು ಅವರು ಅಮೆರಿಕದ ಸಾರ್ವಜನಿಕ ಆರೋಗ್ಯದ ಖ್ಯಾತ ತಜ್ಞ ಡಾ. ಅಂಥೋನಿ ಫೌಸಿ ಅವರ ಜತೆ ವರ್ಚುವಲ್‌ ಸಭೆ ನಡೆಸಿ ಭಾರತದಲ್ಲಿನ ಕೋವಿಡ್‌–19 ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.

ಜತೆಗೆ, ವೈರಸ್‌ ಹೊಸ ರೂಪಾಂತರ ಮತ್ತು ತಳಿ ಹಾಗೂ ಲಸಿಕೆಗಳ ಸಾಮರ್ಥ್ಯ ಕುರಿತು ಸಮಾಲೋಚನೆ ನಡೆಸಿದರು.

ಫೌಸಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಹಿರಿಯ ಸಲಹೆಗಾರರಾಗಿದ್ದಾರೆ.

’ಭಾರತದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಸೇನಾ ಪಡೆಗಳು ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರ ಮೇಕ್‌ಶಿಫ್ಟ್‌ ಆಸ್ಪತ್ರೆಗಳನ್ನು ಬಯಲು ಪ್ರದೇಶದಲ್ಲಿ ನಿರ್ಮಿಸಬೇಕು. ಇತರ ರಾಷ್ಟ್ರಗಳು ಸಹ ವೈದ್ಯಕೀಯ ಸಿಬ್ಬಂದಿ ಮತ್ತು ಔಷಧಗಳನ್ನು ಪೂರೈಸಲು ನೆರವಾಗಬೇಕು’ ಎಂದು ಫೌಸಿ ಅವರು ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆ ನೀಡಿದ ಬಳಿಕ ಸಂಧು ಅವರು ಚರ್ಚೆ ನಡೆಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು