ಭಾನುವಾರ, ಸೆಪ್ಟೆಂಬರ್ 26, 2021
21 °C
ಸಿಬ್ಬಂದಿ ಜೀವಂತವಾಗಿ ಪತ್ತೆಯಾಗುವರೆಂಬ ಭರವಸೆ ಕ್ಷೀಣ: ನೌಕಾಪಡೆ

‘ಕೆಲ ವಸ್ತುಗಳು ಪತ್ತೆ–ಜಲಾಂತರ್ಗಾಮಿ ಮುಳುಗಿರುವುದರ ಸೂಚನೆ’

ಎಪಿ Updated:

ಅಕ್ಷರ ಗಾತ್ರ : | |

Prajavani

ಬನ್ಯುವಾಂಗಿ, ಇಂಡೊನೇಷ್ಯಾ: ನಾಪತ್ತೆಯಾಗಿದ್ದ ಜಲಾಂತರ್ಗಾಮಿಗೆ ಸಂಬಂಧಿಸಿದ ಹಲವಾರು ವಸ್ತುಗಳು ಸಿಕ್ಕಿವೆ. 53 ಜನ ಸಿಬ್ಬಂದಿ ಇದ್ದ ಈ ಜಲಾಂತರ್ಗಾಮಿ ಮುಳುಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಇಂಡೊನೇಷ್ಯಾ ನೌಕಾಪಡೆ ಶನಿವಾರ ಹೇಳಿದೆ.

‘ಟಾರ್ಪಿಡೊ ಸ್ಟ್ರೇಟ್‌ನರ್, ಪೆರಿಸ್ಕೋಪ್‌ಗೆ ಲೇಪಿಸಲು ಬಳಸುವ ಗ್ರೀಸ್‌ನ ಬಾಟಲ್‌, ಪ್ರಾರ್ಥನೆ ಸಲ್ಲಿಸುವಾಗ ಉಪಯೋಗಿಸುವ ರಗ್ಗುಗಳು ಪತ್ತೆಯಾಗಿವೆ’ ಎಂದು ನೌಕಾಪಡೆ ತಿಳಿಸಿದೆ.

‘ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ಜಲಾಂತರ್ಗಾಮಿಗೆ (ಕೆಆರ್‌ಐ ನಂಗ್ಗಾಲಾ 402) ಸಂಬಂಧಿಸಿದ ಹಲವಾರು ವಸ್ತುಗಳನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ, ಅದರಲ್ಲಿದ್ದವರು ಜೀವಂತವಾಗಿ ಪತ್ತೆಯಾಗುತ್ತಾರೆ ಎಂಬ ಭರವಸೆ ಕ್ಷೀಣಿಸಿದೆ’ ಎಂದು ನೌಕಾಪಡೆ ಮುಖ್ಯಸ್ಥ ಯುಡೊ ಮಾರ್ಗೊನೊ ಬಾಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬಾಲಿ ದ್ವೀಪದಿಂದ ಬುಧವಾರ ಪ್ರಯಾಣ ಬೆಳೆಸಿದ್ದ ಈ ಜಲಾಂತರ್ಗಾಮಿ ನಂತರ ನಾಪತ್ತೆಯಾಗಿತ್ತು.

‘ಜಲಾಂತರ್ಗಾಮಿ ನಾಪತ್ತೆಯಾಗಿದೆ ಎಂಬುದರ ಬದಲು ಜಲಾಂತರ್ಗಾಮಿ ಮುಳುಗಿದೆ ಎಂಬ ಪದಗುಚ್ಛ ಈಗ ಬಳಸಬೇಕಾಗಿದೆ’ ಎಂದು ಮಾರ್ಗೊನೊ ಹೇಳಿದರು.

ಅಮೆರಿಕದ ವಿಮಾನ (ಪಿ–8 ಪೊಸಿಡಾನ್‌),ಸೋನಾರ್‌ ಸಾಧನಗಳನ್ನು ಅಳವಡಿಸಿರುವ ಆಸ್ಟ್ರೇಲಿಯಾದ ಯುದ್ಧನೌಕೆಗಳು, ಇಂಡೊನೇಷ್ಯಾದ 20 ಹಡಗುಗಳು ಹಾಗೂ ನಾಲ್ಕು ಯುದ್ಧವಿಮಾನಗಳು ಶನಿವಾರ ಶೋಧಕಾರ್ಯವನ್ನು ಆರಂಭಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು