ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

Last Updated 16 ಫೆಬ್ರುವರಿ 2022, 10:36 IST
ಅಕ್ಷರ ಗಾತ್ರ

ಬಾಲಿ:13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದ ವಸತಿ ಶಾಲೆಯ ಶಿಕ್ಷಕನಿಗೆ ಇಂಡೊನೇಷ್ಯಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

11ರಿಂದ 16 ವರ್ಷ ವಯಸ್ಸಿನ ಬಾಲಕಿಯರಿಗೆ 5 ವರ್ಷಗಳಿಂದ ಅತ್ಯಾಚಾರ ಎಸೆಗಿದ್ದ ಹೆರ್ರಿ ವಿರಾವಾನ್‌ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಅತ್ಯಾಚಾರಕ್ಕೆ ಒಳಗಾಗಿದ್ದ 13 ವಿದ್ಯಾರ್ಥಿನಿಯರ ಪೈಕಿ 8 ಬಾಲಕಿಯರು ಮಕ್ಕಳನ್ನು ಹೆತ್ತಿದ್ದಾರೆ ಎಂದು ಇಂಡೊನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಧಾರ್ಮಿಕ ಗುರುವಾಗಿದ್ದ ಹೆರ್ರಿ ವಿರಾವಾನ್ ವಸತಿ ಶಾಲೆಯನ್ನು ಸ್ಥಾಪನೆ ಮಾಡಿ, ಅದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

2016ರಿಂದಲೂ ವಸತಿ ನಿಲಯದಲ್ಲಿನ ಬಾಲಕಿಯರ ಮೇಲೆ ಅತ್ಯಚಾರ ಮಾಡುತ್ತಿದ್ದ. ಕೆಲ ವಿದ್ಯಾರ್ಥಿನಿಯರು ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ವರದಿಯಾಗಿದೆ.

2021ರ ಮೇ ತಿಂಗಳಲ್ಲಿ ಹೆರ್ರಿ ವಿರಾವಾನ್‌ಗೆ ಸೇರಿದ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದಳು. ಆಕೆಯ ತಂದೆ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣ ಪೊಲೀಸರು ಹೆರ್ರಿ ವಿರಾವಾನ್‌ನನ್ನ ಬಂಧಿಸಿದ್ದರು. ನಂತರ ಅವನ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದವು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೂಲಿ ಕಾರ್ಮಿಕರು, ಬಡವರ ಮಕ್ಕಳು ಹೆಚ್ಚಾಗಿ ಹೆರ್ರಿ ವಿರಾವಾನ್‌ ಶಾಲೆಗೆ ಸೇರುತ್ತಿದ್ದರು. ವಿದ್ಯಾರ್ಥಿ ವೇತನ, ಉಚಿತ ಶಿಕ್ಷಣದ ನೆಪವೊಡ್ಡಿ ಬಾಲಕಿಯರನ್ನು ಸೆಳೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಇಡೀ ಇಂಡೊನೇಷ್ಯಾವನ್ನೇ ಬೆಚ್ಚಿಬೀಳಿಸಿತ್ತು. ವಿರಾವಾನ್​​ಗೆ ಮರಣದಂಡನೆ ವಿಧಿಸಬೇಕು ಎಂದು ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT