ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಸಾ ಅಮೀನಿ ಹತ್ಯೆ ಪ್ರಕರಣ; ಇರಾನ್‌ನಲ್ಲಿ ಪ್ರತಿಭಟನೆ; ಮತ್ತೆ ಇಬ್ಬರಿಗೆ ಗಲ್ಲು

Last Updated 7 ಜನವರಿ 2023, 14:08 IST
ಅಕ್ಷರ ಗಾತ್ರ

ದುಬೈ (ಎಪಿ): ಮಹಸಾ ಅಮೀನಿ ಹತ್ಯೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದ ವೇಳೆ ಅರೆಸೇನಾ ಪಡೆಯ ಸೈನಿಕನೊಬ್ಬನನ್ನು ಕೊಂದ ಆರೋಪದಡಿ ಇಬ್ಬರನ್ನು ಗಲ್ಲಿಗೆ ಏರಿಸಲಾಗಿದೆ ಎಂದು ಇರಾನ್‌ ಸರ್ಕಾರ ಶನಿವಾರ ತಿಳಿಸಿದೆ.

ಮರಣದಂಡನೆಗೆ ಗುರಿಯಾದವರನ್ನು ಮೊಹಮ್ಮದ್ ಕರಾಮಿ ಮತ್ತು ಮೊಹಮ್ಮದ್ ಹೊಸೇನಿ ಎಂದು ಗುರುತಿಸಲಾಗಿದೆ. ಈ ಹಿಂದೆಯೂ ಪ್ರತಿಭಟನೆ ವೇಳೆ ಸೈನಿಕರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಗಲ್ಲಿಗೇರಿಸಲಾಗಿತ್ತು.

‘ಪ್ರತಿಭಟನೆಗೆ ಸಂಬಂಧಿಸಿದಂತೆ ಈಗಾಗಲೇ ಕನಿಷ್ಠ 517 ಮಂದಿ ಪ್ರತಿಭಟನಕಾರರನ್ನು ಕೊಲ್ಲಲಾಗಿದ್ದು, 19,200 ಮಂದಿಯನ್ನು ಬಂಧಿಸಲಾಗಿದೆ’ ಎಂದು ಇರಾನ್‌ನ ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತರು ಹೇಳಿದ್ದಾರೆ. ಆದರೆ, ಕೊಲೆಯಾದವರ ಅಥವಾ ವಶಕ್ಕೆ ಪಡೆದವರ ಸಂಖ್ಯೆ ಎಷ್ಟು ಎಂಬ ಬಗ್ಗೆ ಇರಾನ್‌ನ ಅಧಿಕಾರಿಗಳು ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT