ಭಾನುವಾರ, ಮೇ 22, 2022
25 °C

ಬಾಗ್ದಾದ್: ವಿಮಾನ ನಿಲ್ದಾಣ ಬಳಿ 3 ರಾಕೆಟ್‌ಗಳಿಂದ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಗ್ದಾದ್‌: ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡು ಇರುವ ಸೇನಾ ನೆಲೆ ಸಮೀಪ ಕನಿಷ್ಠ ಮೂರು ರಾಕೆಟ್‌ಗಳಿಂದ ಶುಕ್ರವಾರ ದಾಳಿ ನಡೆದಿದೆ ಎಂದು ಇರಾಕ್‌ ಅಧಿಕಾರಿಗಳು ಹೇಳಿದ್ದಾರೆ.

ಸೇನಾ ನೆಲೆಯಲ್ಲಿ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಯೋಧರು ಹಾಗೂ ಮಿಲಿಟರಿ ಸಲಹೆಗಾರರು ಇದ್ದು, ಸದ್ಯ ಬಳಕೆ ಮಾಡದ ವಾಣಿಜ್ಯ ವಿಮಾನವೊಂದು ಈ ದಾಳಿಯಲ್ಲಿ ಹಾನಿಗೊಳಗಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬೆಳಗಿನ ಅವಧಿಯಲ್ಲಿ ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ. ವಿಮಾನ ನಿಲ್ದಾಣದ ನಾಗರಿಕ ಹಾಗೂ ಮಿಲಿಟರಿ ಪ್ರದೇಶಗಳ ನಡುವಿನ ಜಾಗಕ್ಕೆ ರಾಕೆಟ್‌ಗಳು ಅಪ್ಪಳಿಸಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ನಾಗರಿಕ ವಿಮಾನಗಳ ಹಾರಾಟಕ್ಕೆ ಈ ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ’ ಎಂದು ಇರಾಕಿ ಏರವೇಸ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು