ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌: ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ: ಐಎಸ್‌ ಖುರಾಸನ್‌

Last Updated 27 ಆಗಸ್ಟ್ 2021, 6:21 IST
ಅಕ್ಷರ ಗಾತ್ರ

ದುಬೈ: ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್‌ನ ಖುರಾಸನ್‌ ಘಟಕ ಹೊತ್ತಿಕೊಂಡಿದೆ.

‘ಕಾಬೂಲ್‌ ವಿಮಾನ ನಿಲ್ಧಾಣದಲ್ಲಿ ಸೇರಿದ್ದ ಜನರ ಮೇಲೆ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಮತ್ತು ಬಂದೂಕುಧಾರಿಗಳು ಗುರುವಾರ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ 60 ಅಫ್ಗನ್ನರು ಮತ್ತು ಅಮೆರಿಕ ಸೇನೆಯ 13 ಮಂದಿ ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ಈ ದಾಳಿಯ ಸಂಪೂರ್ಣ ಹೊಣೆ ಹೊತ್ತಿರುವ ಇಸ್ಲಾಮಿಕ್‌ ಸ್ಟೇಟ್‌–ಖುರಾಸನ್‌ ಸಂಘಟನೆಯು ಅಮೆರಿಕ ಸೇನೆ ಮತ್ತು ಅದರ ಅಫ್ಗನ್‌ ಮಿತ್ರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿದೆ.

ಐಎಸ್‌–ಖುರಾಸನ್‌ ಸಂಘಟನೆಯು ಹೇಳಿಕೆಯೊಂದಿಗೆ ಆತ್ಮಾಹುತಿ ದಾಳಿ ನಡೆಸಿದ ಬಾಂಬರ್‌ನ ಫೋಟೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಾಂಬರ್‌ ಸ್ಪೋಟಕವನ್ನೊಳಗೊಂಡ ಬೆಲ್ಟ್‌ ಅನ್ನು ಧರಿಸಿ ಐಎಸ್‌ನ ಕಪ್ಪು ಬಾವುಟದ ಮುಂದೆ ನಿಂತಿರುವುದು ಕಾಣಬಹುದು. ಈ ಚಿತ್ರದಲ್ಲಿ ಉಗ್ರ ತನ್ನ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದಾನೆ.

ಒಬ್ಬ ಬಾಂಬರ್‌ನ ಫೋಟೊವನ್ನು ಬಿಡುಗಡೆಗೊಳಿಸಿರುವ ಐಎಸ್‌–ಖುರಾಸನ್‌ ಇನ್ನೊಬ್ಬ ಬಾಂಬರ್‌ ಮತ್ತು ಬಂದೂಕುಧಾರಿಗಳ ಬಗ್ಗೆ ಉಲ್ಲೇಖಿಸಿಲ್ಲ.

‘ಅಮೆರಿಕ ಸೇನೆ ಮತ್ತು ಅನುವಾದಕರು ಸೇರಿದಂತೆ ಇತರರು ಜಮಾಯಿಸಿದ್ದ ಪ್ರದೇಶದಿಂದ 5 ಮೀಟರ್‌ ದೂರದಲ್ಲಿದ್ದ ತಾಲಿಬಾನ್‌ ಚೆಕ್‌ಪೋಸ್ಟ್‌ ಅನ್ನು ಬಾಂಬರ್‌ ಸುಲಭವಾಗಿ ದಾಟಿ ಹೋಗಿದ್ದಾನೆ. ಈ ದಾಳಿಯಲ್ಲಿ ಕೆಲ ತಾಲಿಬಾನ್‌ಗಳು ಮೃತಪಟ್ಟಿದ್ದಾರೆ’ ಎಂದು ಐಎಸ್‌ ಖುರಾಸನ್‌ ಹೇಳಿದೆ.

ಅಮೆರಿಕದೊಂದಿಗೆ ಶಾಂತಿ ಒಪ್ಪಂದವನ್ನು ಸ್ವೀಕರಿಸಿದ್ದಕ್ಕೆ ತಾಲಿಬಾನ್‌ ಅನ್ನು ದೇಶದ್ರೋಹಿ ಎಂದು ಐಎಸ್‌ ಪರಿಗಣಿಸಿದೆ ಎನ್ನಲಾಗಿದೆ.

‘ತಾವು ದಾಳಿ ಮಾಡಿದ ಪ್ರದೇಶದಲ್ಲಿ ಅಮೆರಿಕ ಸೇನೆಯು ತನ್ನ ಪಡೆಯೊಂದಿಗೆ ಕೆಲಸ ಮಾಡಿದ ವ್ಯಕ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದರು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT