ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Florona: ಇಸ್ರೇಲ್‌ನಲ್ಲಿ ಮೊದಲ ಪ್ರಕರಣ ಪತ್ತೆ; ಏನಿದು ಫ್ಲೋರೊನಾ?

Last Updated 2 ಜನವರಿ 2022, 9:24 IST
ಅಕ್ಷರ ಗಾತ್ರ

ಜೆರುಸಲೇಂ: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕಿನ ಆತಂಕದ ನಡುವೆ ಇಸ್ರೇಲ್‌ನಲ್ಲಿ ಫ್ಲೋರೊನಾದ ಮೊದಲ ಪ್ರಕರಣ ವರದಿಯಾಗಿದೆ.

ಏನಿದು ಫ್ಲೋರೊನಾ ?
ಏಕಕಾಲದಲ್ಲಿ ಕೋವಿಡ್ ಹಾಗೂ ಜ್ವರದಿಂದ ಕೂಡಿದ ತೀವ್ರ ವೈರಸ್ ರೋಗದ (ಇನ್‌ಫ್ಲೂಯೆನ್ಜಾ) ಸಂಯೋಜನೆ ಇದಾಗಿದೆ.

ಇಸ್ರೇಲ್‌ನಲ್ಲಿ ಇತ್ತೀಚೆಗೆ ಹೆರಿಗೆಯಾದ ಮಹಿಳೆಯಲ್ಲಿ ಫ್ಲೋರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ವೈನೆಟ್‌ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.

ಸೋಂಕಿತ ಮಹಿಳೆ ಕೋವಿಡ್ ಲಸಿಕೆ ಹಾಕಿಸಿಲ್ಲ ಎಂಬುದು ತಿಳಿದು ಬಂದಿದೆ. ಸದ್ಯ ಮಹಿಳೆಯು ಸೌಮ್ಯ ಲಕ್ಷಣವನ್ನು ಹೊಂದಿದ್ದು, ಮತ್ತಷ್ಟು ತೀವ್ರ ಅನಾರೋಗ್ಯವನ್ನು ಉಂಟು ಮಾಡಬಹುದೇ ಎಂಬುದನ್ನು ಇಸ್ರೇಲ್ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಹೆರಿಗೆಯ ಸಮಯದಲ್ಲಿ ಜ್ವರದಿಂದ ಬಳಲುತ್ತಿರುವ ಮಹಿಳೆಗೆ ಕೊರೊನಾ ವೈರಸ್ ಅಥವಾ ವೈರಲ್ ಜ್ವರ ತಗುಲಿದೆಯೇ ಎಂಬುದನ್ನು ನಿರ್ಧರಿಸುವುದು ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ಅನಾರೋಗ್ಯವು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT