ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುದ್ರಗ್ರಹ ಮಾದರಿ ಹೊತ್ತ ಜಪಾನ್‌ನ ಗಗನನೌಕೆ ಭೂಮಿಯತ್ತ

Last Updated 5 ಡಿಸೆಂಬರ್ 2020, 10:42 IST
ಅಕ್ಷರ ಗಾತ್ರ

ಟೋಕಿಯೊ: ‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯು ಕ್ಯಾಪ್ಸೂಲ್ (ಗಗನನೌಕೆ) ಅನ್ನು ಯಶಸ್ವಿಯಾಗಿ ಬೇರ್ಪಡಿಸಿ, ಕ್ಷುದ್ರಗ್ರಹಗಳ ಮಣ್ಣು, ಕಲ್ಲುಗಳಂಥ ಮಾದರಿಗಳನ್ನು ಹೊತ್ತ ಈ ಕ್ಯಾಪ್ಸೂಲ್‌ಅನ್ನು ಭೂಮಿಯತ್ತ ಕಳುಹಿಸಿದೆ ಎಂದು ಜಪಾನ್‌ನ ಬಾಹ್ಯಾಕಾಶ ಸಂಸ್ಥೆ ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜೆಎಇಎ) ಶನಿವಾರ ಹೇಳಿದೆ.

ಈ ಮಾದರಿಗಳು ಸೌರ ಮಂಡಲದ ರಚನೆ ಮತ್ತು ಭೂಮಿಯಲ್ಲಿ ಜೀವಗಳ ಉಗಮದ ಬಗ್ಗೆ ಸುಳಿವು ನೀಡಬಹುದು ಎಂದು ಜೆಎಇಎ ವಿಶ್ವಾಸ ವ್ಯಕ್ತಪಡಿಸಿದೆ.

2,20,000 ಕಿ.ಮೀ. ದೂರದಲ್ಲಿಕ್ಯಾಪ್ಸೂಲ್ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಆಸ್ಟ್ರೇಲಿಯಾದ ವೂಮೆರಾ ಪ್ರದೇಶದಲ್ಲಿ ಭಾನುವಾರ ಇಳಿಯಲಿದೆ ಎಂದೂ ತಿಳಿಸಿದೆ.

ಹಯಾಬುಸಾ- 2 ಬಾಹ್ಯಾಕಾಶನೌಕೆ ವರ್ಷದ ಹಿಂದೆ ಸುಮಾರು 300 ದಶಲಕ್ಷ ಕಿ.ಮೀ. (30 ಕೋಟಿ ಕಿ.ಮೀ.) ದೂರದಲ್ಲಿರುವ ರ‍್ಯುಗು ಕ್ಷುದ್ರಗ್ರಹದಿಂದ ಹೊರಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT