ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌: ಕೋವಿಡ್‌ ಪ್ರಸರಣ ತಡೆಗೆ ಬಾರ್‌, ಚಿತ್ರಮಂದಿರ ಮುಚ್ಚಲು ನಿರ್ಧಾರ

Last Updated 25 ಏಪ್ರಿಲ್ 2021, 10:43 IST
ಅಕ್ಷರ ಗಾತ್ರ

ಟೋಕಿಯೊ: ಕೋವಿಡ್‌ ಪ್ರಸರಣವನ್ನು ತಡೆಯುಲು ತುರ್ತು ಕ್ರಮದ ಭಾಗವಾಗಿ ಅಂಗಡಿ, ಬಾರ್‌ ಮತ್ತು ಚಿತ್ರಮಂದಿರಗಳನ್ನು ಮುಚ್ಚಲು ಜಪಾನ್‌ ಸರ್ಕಾರ ನಿರ್ಧರಿಸಿದೆ.

ಜಪಾನಿನಲ್ಲಿ ‘ಗೋಲ್ಡನ್‌ ವೀಕ್‌’ ರಜಾದಿನಗಳು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಟೋಕಿಯೊ, ಒಸಾಕಾ, ಕ್ಯೂಟೊ ಮತ್ತು ಹ್ಯೋಗೊದಲ್ಲಿ 17 ದಿನಗಳ ನಿರ್ಬಂಧವನ್ನು ಹೇರಿದೆ.

ಈ ನಿರ್ಬಂಧಗಳು ಖಾದ್ಯ ಮಳಿಗೆ, ಥೀಮ್‌ ಪಾರ್ಕ್‌ಗಳ ಮೇಲೆ ಕೇಂದ್ರೀಕೃತವಾಗಿದೆ. ರೈಲುಗಳು ಎಂದಿನಂತೆ ಚಲಿಸಲಿವೆ ಹಾಗೂ ಶಾಲೆಗಳು ಕೂಡ ತೆರದಿರಲಿವೆ. ಹಾಗಾಗಿ ಈ ಕ್ರಮಗಳು ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಶಂಕಿಸಲಾಗಿದೆ.

ಜಪಾನ್‌ ಸರ್ಕಾರವು ಈಗಾಗಲೇ ಕೊರೊನಾ ಸೋಂಕನ್ನು ನಿಯಂತ್ರಿಸಲು ಮೂರು ಬಾರಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಜಪಾನಿನಲ್ಲಿ ಲಸಿಕೆ ಅಭಿಯಾನವು ಬಹಳ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಜನಸಂಖ್ಯೆಯ ಶೇಕಡ 1ರಷ್ಟು ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಜಪಾನಿನಲ್ಲಿ ಕೇವಲ ಫೈಜರ್‌ ಲಸಿಕೆಯನ್ನು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT