ಮೂರನೇ ಚಾರ್ಲ್ಸ್ ಪಟ್ಟಾಭಿಷೇಕಕ್ಕಾಗಿ ‘ಐತಿಹಾಸಿಕ ಕಿರೀಟ’ಕ್ಕೆ ಮಾರ್ಪಾಡು

ಲಂಡನ್: ಬೆಲೆಬಾಳುವ ರತ್ನಗಳಿಂದ ಕೂಡಿದ ಕಿರೀಟವೊಂದನ್ನು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರ ಅಳತೆಗೆ ಸರಿಹೊಂದುವಂತೆ ಮಾರ್ಪಾಡುವ ಮಾಡುವ ಸಲುವಾಗಿ ಟವರ್ ಆಫ್ ಲಂಡನ್‌ನ ಜೆವೆಲ್ ಹೌಸ್‌ನಲ್ಲಿ ಹೊರತೆಗೆಯಲಾಗಿದೆ.
ಮುಂದಿನ ವರ್ಷ ಮೇ 6ರಂದು ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕವು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯಲಿದೆ. ಬ್ರಿಟನ್ ರಾಜಮನೆತನದ ಸಂಪ್ರದಾಯದಂತೆ ರಾಜನಿಗೆ ಸೇಂಟ್ ಎಡ್ವರ್ಡ್ಸ್ ಕಿರೀಟವನ್ನು ತೊಡಿಸಿ ಪಟ್ಟಾಭಿಷೇಕ ಮಾಡಲಾಗುವುದು. ಈ ಕಿರೀಟವನ್ನು ‘ಐತಿಹಾಸಿಕ ಮಹತ್ವವಿರುವ ಆಭರಣ’ ಬಣ್ಣಿಸಲಾಗುತ್ತದೆ ಎಂದು ಬಕ್ಕಿಂಗ್‌ಹ್ಯಾಮ್ ಅರಮನೆ ಶನಿವಾರ ತಿಳಿಸಿದೆ.
ಸೇಂಟ್ ಎಡ್ವರ್ಡ್ ಮಧ್ಯಕಾಲೀನ ಕಿರೀಟವನ್ನು 1649ರಲ್ಲಿ ಕರಗಿಸಲಾಗಿತ್ತು. 1661ರಲ್ಲಿ ಎರಡನೇ ಚಾರ್ಲ್ಸ್ ಅವರ ಪಟ್ಟಾಭಿಷೇಕಕ್ಕಾಗಿ ಅದನ್ನು ಹೊಸದಾಗಿ ವಿನ್ಯಾಸ ಮಾಡಲಾಗಿತ್ತು. 1953ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಅವರ ಪಟ್ಟಾಭಿಷೇಕ ನಡೆಯುವ ವೇಳೆ ಈ ಕಿರೀಟವನ್ನೇ ಅವರಿಗೆ ತೊಡಿಸಲಾಗಿತ್ತು.
ಚಾರ್ಲ್ಸ್ ಜೊತೆಗೆ ಅವರ ಪತ್ನಿ ಕ್ಯಾಮಿಲ್ಲಾ ಅವರಿಗೂ ರಾಣಿಯನ್ನಾಗಿ ಪಟ್ಟಾಭಿಷೇಕ ಮಾಡಲಾಗುವುದು ಎನ್ನಲಾಗಿದೆ. ಆ ವೇಳೆ ಅವರು ವಸಾಹತು ಕಾಲದಲ್ಲಿ ಭಾರತದಿಂದ ಒಯ್ದಿದ್ದ ಕೋಹಿ ನೂರ್ ವಜ್ರವಿರುವ ಕಿರೀಟ ಧರಿಸಲಿದ್ದಾರೆ ಎಂಬ ನಿರೀಕ್ಷೆ ಇದೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.