ಶ್ರೀನಗರ: ದೇಶೀಯ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಕೇಂದ್ರಾಡಳಿತ ಪ್ರದೇಶ ಲಡಾಖ್, ಚೀನಾ– ಪಾಕಿಸ್ತಾನ ಗಡಿಯಲ್ಲಿರುವ ಸಂರಕ್ಷಿತ ಪ್ರದೇಶಗಳಿಗೆ ಭಾರತೀಯರಿಗೆ ಭೇಟಿ ನೀಡಲು ವಿಧಿಸಿದ್ದ ಒಳರೇಖೆ ಅನುಮತಿಯ (ಐಎಲ್ಪಿ) ನಿರ್ಬಂಧವನ್ನು ತೆರವುಗೊಳಿಸಿದೆ.

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವಾಲಯವು,‘ಸಂರಕ್ಷಿತ ಪ್ರದೇಶಗಳಲ್ಲಿ ಭಾರತೀಯ ಪ್ರಜೆಗಳು, ದೇಶೀಯ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳಿಗೆ ವಿಧಿಸಲಾಗಿದ್ದ ಐಎಲ್ಪಿ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ’ ಎಂದು ತಿಳಿಸಿದೆ.

ಆದರೆ, ಈ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಲು ಬಯಸುವ ವಿದೇಶಿಯರು ಪರವಾನಗಿ ಅರ್ಜಿ ಪಡೆಯಬೇಕಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಪರವಾನಗಿಯ ಮಾನ್ಯತೆಯನ್ನು 7 ದಿನಗಳಿಂದ 15 ದಿನಗಳಿಗೆ ವಿಸ್ತರಿಸಲಾಗಿದೆ.

ನುಬ್ರಾ ಕಣಿವೆ, ಪಾಂಗೊಂಗ್ ಸರೋವರ, ಸೊಮೊರಿರಿ ಸರೋವರ ಮತ್ತು ಆರ್ಯನ್ ಗ್ರಾಮಗಳನ್ನು ಒಳಗೊಂಡಿರುವ ಲಡಾಖ್ನ ಅಧಿಸೂಚಿತ ಸಂರಕ್ಷಿತ ಪ್ರದೇಶಗಳಿಗೆ ಪ್ರಯಾಣಿಸಲು ಈ ಹಿಂದೆ ಭಾರತೀಯ ಪ್ರವಾಸಿಗರು ಜಿಲ್ಲಾಡಳಿತದಿಂದ ಐಎಲ್ಪಿಗೆ ಅರ್ಜಿ ಸಲ್ಲಿಸಬೇಕಿತ್ತು.

ಲಡಾಖ್ನ ಸಂರಕ್ಷಿತ ಪ್ರದೇಶಗಳು ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಮತ್ತು ಚೀನಾದೊಂದಿಗೆ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.