ಭಾನುವಾರ, ಮೇ 22, 2022
24 °C

ವಿಕ್ಟೋರಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಆಸೀಸ್ ಪ್ರಧಾನಿ ಖಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ಆಸ್ಟ್ರೇಲಿಯಾಕ್ಕೆ ಭಾರತ ಸರ್ಕಾರವು ಉಡುಗೊರೆಯಾಗಿ ನೀಡಿದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ ಎಂಬುದು ವರದಿಯಾಗಿದೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಘಟನೆಯನ್ನು ಖಂಡಿಸಿದ್ದು, 'ಈ ಕೃತ್ಯ ಅವಮಾನಕರವಾಗಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ಸಮುದಾಯದಲ್ಲಿ ಆಘಾತ ಮತ್ತು ಅತೀವ ಬೇಸರವನ್ನು ಉಂಟು ಮಾಡಿದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಭಾರತದ 75ನೇ ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಶುಕ್ರವಾರ ವಿಕ್ಟೋರಿಯಾದ ರೋವಿಲ್‌ನಲ್ಲಿ ಆಸ್ಟ್ರೇಲಿಯಾದ ಭಾರತೀಯ ಸಮುದಾಯ ಕೇಂದ್ರದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದ ಕೆಲವೇ ಗಂಟೆಗಳ ಬಳಿಕ ಈ ಘಟನೆ ಸಂಭವಿಸಿದೆ ಎಂದು 'ದಿ ಏಜ್' ಪತ್ರಿಕೆ ವರದಿ ಮಾಡಿದೆ.

'ಈ ರೀತಿಯ ಅಗೌರವವನ್ನು ನೋಡುವುದು ಅವಮಾನಕರ ಮತ್ತು ತುಂಬಾನೇ ಬೇಸರವಾಗಿದೆ' ಎಂದು ಮಾರಿಸನ್ ತಿಳಿಸಿದ್ದಾರೆ.

'ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಸಹಿಸಲಾಗುವುದಿಲ್ಲ. ಇದಕ್ಕೆ ಕಾರಣರಾದವರು ಯಾರೇ ಆದರೂ ಆಸ್ಟ್ರೇಲಿಯಾದ ಭಾರತೀಯ ಸಮುದಾಯಕ್ಕೆ ಅಗೌರವವನ್ನು ತೋರಿದ್ದಾರೆ. ಅವರಿಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.

ಘಟನೆಯನ್ನು ಭಾರತೀಯ ಸಮುದಾಯವು ಸಹ ಬಲವಾಗಿ ಖಂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು