ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನಾದ್ಯಂತ ಉನ್ನತ ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಭಾರತೀಯರು

Last Updated 14 ಫೆಬ್ರವರಿ 2021, 9:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಜಗ‌ತ್ತಿನಲ್ಲಿ55 ಕೋಟಿಯಷ್ಟು ಭಾರತೀಯ ಮೂಲದವರಿದ್ದು,ಅವರ ಪೈಕಿ 200ಕ್ಕೂ ಹೆಚ್ಚು ಮಂದಿ ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅಮೆರಿಕ ಮೂಲದ ಸಂಸ್ಥೆ ಇಂಡಿಯಾಸ್ಪೊರಾ ತಿಳಿಸಿದೆ.

ಸೋಮವಾರ ನಡೆಯಲಿರುವ ಅಮೆರಿಕದ ಅಧ್ಯಕ್ಷರ ದಿನಾಚರಣೆಯ ಹಿನ್ನೆಲೆಯಲ್ಲಿಇಂಡಿಯಾಸ್ಪೊರಾವು 15 ದೇಶಗಳಲ್ಲಿ 200 ಕ್ಕೂ ಹೆಚ್ಚು ಉನ್ನತ ಸ್ಥಾನಗಳಲ್ಲಿರುವ ಭಾರತೀಯರ ಹೆಸರನ್ನು ಪಟ್ಟಿ ಮಾಡಿದೆ. ಸೋಮವಾರವೇ ಅದನ್ನು ಬಿಡುಗಡೆ ಮಾಡಲಿದೆ.

‘ಈ ಪಟ್ಟಿಗೆ ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ ಚುನಾಯಿತ ಅಧಿಕಾರಿಗಳು, ನಾಗರಿಕ ಸೇವೆ ಅಧಿಕಾರಿಗಳ ಹೆಸರು ಕೂಡ ಇದೆ. ಈ ಗಣ್ಯರು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ನಾಯಕತ್ವದ ಮೂಲಕ ಪರಿಣಾಮ ಬೀರಿದ್ದಾರೆ’ ಎಂದು ಇಂಡಿಯಾಸ್ಪೊರಾದಸ್ಥಾಪಕ ಎಂ.ಆರ್‌ ರಂಗಸ್ವಾಮಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT