ಶನಿವಾರ, ನವೆಂಬರ್ 26, 2022
23 °C

ರಷ್ಯಾ ಕ್ಷಿಪಣಿ, ಡ್ರೋನ್‌ ದಾಳಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌ (ಎಪಿ): ದಕ್ಷಿಣ ಉಕ್ರೇನ್‌ನ ಝಪೋರಿಜಝಿಯಾ ನಗರದ ಅಪಾರ್ಟ್‌ಮೆಂಟ್‌ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ  ಮತ್ತು ಡ್ರೋನ್‌ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

‘ಇರಾನ್ ನಿರ್ಮಿತ ‘ಶಹೀದ್‌–136’ ಡ್ರೋನ್‌ಗಳು ನಗರದ ಎರಡು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿವೆ. ಇದೇ ಮೊದಲ ಬಾರಿಗೆ ಇವುಗಳನ್ನು ಇಲ್ಲಿ ಬಳಸಲಾಗಿದೆ’ ಎಂದು ಪ್ರಾದೇಶಿಕ ಗವರ್ನರ್‌ ಒಲೆಕ್ಸಾಂಡರ್‌ ಸ್ಟಾರುಖ್‌ ತಿಳಿಸಿದ್ದಾರೆ.

ರಷ್ಯಾ, ಇರಾನ್‌ ನಿರ್ಮಿತ ಡ್ರೋನ್‌ ಮೂಲಕ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದೆ. ಮಾನವರಹಿತ ಮತ್ತು  ಬಿಸಾಡಬಹುದಾದ ‘ಕಮಿಕಝೆ ಡ್ರೋನ್’ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಕ್ಷಿಪಣಿಯಷ್ಟು ನಿಖರತೆ ಇಲ್ಲದಿದ್ದರೂ ನಿಗದಿತ ಗುರಿಯ ಮೇಲೆ ದಾಳಿ ನಡೆಸಿ ಪರಿಣಾಮಕಾರಿ ಹಾನಿಯುಂಟುಮಾಡುತ್ತವೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು