ಮಂಗಳವಾರ, ಮೇ 24, 2022
27 °C

ಮ್ಯಾನ್ಮಾರ್: ಸೂಕಿ ವಿರುದ್ಧ ಹೊಸ ಆರೋಪ

ಎಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್: ‘ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರ ವಿರುದ್ಧ ಮ್ಯಾನ್ಮಾರ್‌ನ ಪೊಲೀಸರು ಹೊಸ ಆರೋಪವನ್ನು ಹೊರಿಸಿದ್ದು, ಇದು ಸೂಕಿ ಅವರನ್ನು ವಿಚಾರಣೆಯಿಲ್ಲದೆ ಅನಿರ್ದಿಷ್ಟಾವಧಿಯವರೆಗೆ ಬಂಧಿಸಲು ಅನುವು ಮಾಡಿಕೊಡುತ್ತದೆ’ ಎಂದು ಸೂಕಿ ಪರ ವಕೀಲ ಮಂಗಳವಾರ ಹೇಳಿದ್ದಾರೆ.

‘ಕೊರೊನಾ ವೈರಸ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಳಸಲಾಗುವ ನೈಸರ್ಗಿಕ ವಿಪತ್ತು ನಿರ್ವಹಣಾ ಕಾನೂನಿನ 25ನೇ ವಿಧಿಯನ್ನು ಉಲ್ಲಂಘಿಸಿದ ಆರೋಪ ಸೂಕಿ ವಿರುದ್ಧ ಹೊರಿಸಲಾಗಿದೆ’ ಎಂದು ಸೂಕಿ ಪರ ವಕೀಲ ಖಿನ್ ಮಾಂಗ್ ಜಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ಅವರು ನಾಯ್ಪಿಟಾವ್‌ನಲ್ಲಿ ನ್ಯಾಯಾಧೀಶರನ್ನು ಭೇಟಿಯಾದರು.

ನೈಸರ್ಗಿಕ ವಿಪತ್ತು ನಿರ್ವಹಣಾ ಕಾನೂನಿನ 25ನೇ ವಿಧಿಯ ಪ್ರಕಾರ ಸೂಕಿ ಅವರಿಗೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಈ ಶಿಕ್ಷೆಯನ್ನು ಯಾವುದೇ ವಿಚಾರಣೆ ಇಲ್ಲದೆಯೇ ವಿಧಿಸಬಹುದಾಗಿದೆ. ಫೆ. 1ರಂದು ಸೂಕಿ ಅವರನ್ನು ಉಚ್ಚಾಟಿಸುವ ಮುನ್ನ ಅವರ ವಿರುದ್ಧ ನೋಂದಣಿ ಮಾಡದಿರುವ ವಾಕಿಟಾಕಿ ಬಳಸುತ್ತಿರುವ ಆರೋಪ ಹೊರಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು