ಮಂಗಳವಾರ, ಆಗಸ್ಟ್ 16, 2022
20 °C

ನೇಪಾಳದಲ್ಲಿ ತಾರಾ ಏರ್ ವಿಮಾನ ಪತನ: 14 ಮೃತದೇಹ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಠ್ಮಂಡು: ನೇಪಾಳದ ಮುಸ್ಟಾಂಗ್‌ ಜಿಲ್ಲೆಯ ಥಸಾಂಗ್‌ ಪಟ್ಟಣ ಬಳಿ ಭಾನುವಾರ ಪತಗೊಂಡಿದ್ದ ತಾರಾ ಏರ್‌ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, 14 ಮೃತದೇಹಗಳನ್ನು ಹೊರತೆಗೆಯಲಾಗಿದೆ. 

ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಲಘು ವಿಮಾನವು ಭಾನುವಾರ ಪತನಗೊಂಡಿತ್ತು. 

ಈ ವಿಮಾನದ ತುಣುಕುಗಳು ವಾಯುವ್ಯ ನೇಪಾಳದ ಮುಸ್ಟಾಂಗ್‌ ಜಿಲ್ಲೆಯ ಥಸಾಂಗ್‌ ಸಾನೊ ಸ್ವರೆ ಭಿರ್‌ ಸಮೀಪದ 14,500 ಅಡಿ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿವೆ.

ವಿಮಾನವು ಕಣ್ಮರೆಯಾದ ನಂತರ ಸುಮಾರು 20 ಗಂಟೆಗಳ ಬಳಿಕ 14 ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ತಿಳಿಸಿದ್ದಾರೆ.

ವಿಮಾನದ ಅವಶೇಷ ಚಿತ್ರವನ್ನು ಟ್ವೀಟ್ ಮೂಲಕ ಸಿಲ್ವಾಲ್‌ ಹಂಚಿಕೊಂಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು