ಶುಕ್ರವಾರ, ಮಾರ್ಚ್ 31, 2023
22 °C

ಸಣ್ಣ ಫ್ಲಾಟ್‌ಗೆ ಮರಳಲಿರುವ ಬ್ರಿಟನ್‌ ನೂತನ ಪ್ರಧಾನಿ ಸುನಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಕುಟುಂಬವು 10 ಡೌನಿಂಗ್‌ ಸ್ಟ್ರೀಟ್‌ ನಿವಾಸಕ್ಕೆ ಬದಲು ಈ ಮೊದಲಿನ ತಮ್ಮ ಸಣ್ಣ ಫ್ಲಾಟ್‌ಗೆ ಮರಳಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿಗೆ ಚಾನ್ಸಲರ್‌ ಆಗಿದ್ದ ಸಂದರ್ಭದಲ್ಲಿ ಸುನಕ್‌, ಅವರ ಪತ್ನಿ ಅಕ್ಷತಾ ಮೂರ್ತಿ ಮತ್ತು  ಅವರ ಇಬ್ಬರು ಮಕ್ಕಳು ಇದೇ ನಿವಾಸದಲ್ಲಿ ವಾಸಿಸುತ್ತಿದ್ದರು. ಈ ನಿವಾಸ ಅವರಿಗೆ ಇಷ್ಟವಾಗಿದ್ದು ಅವರ ಕುಟುಂಬ ಇಲ್ಲಿ ಬಹಳ ಸಂತಸದಿಂದಿತ್ತು ಎಂದು ಡೌನಿಂಗ್‌ ಸ್ಟ್ರೀಟ್‌ ವಕ್ತಾರೆ ತಿಳಿಸಿದ್ದಾರೆ.

ನಂ. 10 ಡೌನಿಂಗ್ ಸ್ಟ್ರೀಟ್‌ 1735ರಿಂದ ಬ್ರಿಟನ್‌ ಪ್ರಧಾನಿಗಳ ನಿವಾಸವಾಗಿತ್ತು.  ಪ್ರಧಾನಿಗಳ ಅಧಿಕೃತ ನಿವಾಸವಾಗಿ, ಕಚೇರಿಯಾಗಿ ಮತ್ತು ವಿಶ್ವದಾದ್ಯಂತ ಆಗಮಿಸುವ ನಾಯಕ ಆತಿಥ್ಯಕ್ಕಾಗಿ ಇದು ಬಳಕೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು